ರೂ. 5.6 ಕೋಟಿ ಲಂಚ ಪಡೆದ ಬಿಜೆಪಿ ನಾಯಕ, ಬಿಜೆಪಿ ಆಂತರಿಕ ತನಿಖಾ ವರದಿ ಸೋರಿಕೆ |News Mirchi

ರೂ. 5.6 ಕೋಟಿ ಲಂಚ ಪಡೆದ ಬಿಜೆಪಿ ನಾಯಕ, ಬಿಜೆಪಿ ಆಂತರಿಕ ತನಿಖಾ ವರದಿ ಸೋರಿಕೆ

ತಿರುವನಂತಪುರ: ಮೆಡಿಕಲ್ ಕಾಲೇಜಿಗೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ(ಎಂಸಿಐ) ದಿಂದ ಅನುಮತಿ ಕೊಡಿಸಲು ಉದ್ಯಮಿಯೊಬ್ಬರಿಂದ ಕೇರಳ ಬಿಜೆಪಿ ನಾಯಕ ರೂ.5.60 ಕೋಟಿ ಲಂಚ ಪಡೆದಿರುವುದು ಬೆಳಕಿಗೆ ಬಂದಿದೆ. ಇದು ಪ್ರತಿಪಕ್ಷಗಳು ಮಾಡಿದ ಆರೋಪವಲ್ಲ, ಸ್ವತಃ ಬಿಜೆಪಿ ಆಂತರಿಕ ತನಿಖಾ ತಂಡವೇ ಖಚಿತಪಡಿಸಿದ ಸತ್ಯ. ಲಂಚ ಪಡೆದ ಬಿಜೆಪಿ ನಾಯಕನ ಮೇಲೆ ತನಿಖಾ ತಂಡ ನೀಡಿದ ವರದಿ ಮಾಧ್ಯಮಗಳಿಗೆ ಸೋರಿಕೆಯಾಗಿದ್ದರಿಂದಾಗಿ ಇದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಈ ಪ್ರಕರಣದ ಕುರಿತು ಸಿಬಿಐ ನಿಂದ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ.

ಲಂಚ ಪ್ರಕರಣದಲ್ಲಿ ಕೇಳಿಬಂದಿರುವ ಬಿಜೆಪಿ ನಾಯಕನ ಹೆಸರನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಪ್ರಧಾನಿಯವರ  ಭ್ರಷ್ಟಾಚಾರ ರಹಿತ ಆಡಳಿತ ಹೇಳಿಕೆಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿವೆ. ಬಿಜೆಪಿ ಕೋ ಆಪರೇಟಿವ್ ಸೆಲ್ ಕನ್ವೀನರ್ ಆರ್.ಎಸ್.ವಿನೋದ್, ಎಸ್.ಆರ್.ಆಸ್ಪತ್ರೆಗೆ ಕಾಲೇಜು ಸ್ಥಾನಮಾನ ಕೊಡಿಸಲು ಲಂಚ ಪಡೆದಿದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅವರ ಮೇಲೆ ಆಂತರಿಕ ತನಿಖೆ ನಡೆಸಿದ ಬಿಜೆಪಿ ತಂಡ ನೀಡಿದ್ದ ವರದಿಯನ್ನು, ಬಿಜೆಪಿ ಅಸಂತೃಪ್ತ ನಾಯಕರು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ. ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಲು ಕೇರಳ ಬಿಜೆಪಿ ನಾಯಕರು ನಿರಾಕರಿಸಿದ್ದಾರೆ.

Loading...
loading...
error: Content is protected !!