ನನ್ನ ವಿರುದ್ಧ ಅಪಪ್ರಚಾರಕ್ಕೆ ಕಂಪ್ಯೂಟರ್ ಮುಂದೆ ಕೂತಿದ್ದಾರೆ 1000 ಜನ – News Mirchi

ನನ್ನ ವಿರುದ್ಧ ಅಪಪ್ರಚಾರಕ್ಕೆ ಕಂಪ್ಯೂಟರ್ ಮುಂದೆ ಕೂತಿದ್ದಾರೆ 1000 ಜನ

ದೇಶದ ಜನತೆಯ ಒಗ್ಗಟ್ಟು ನಿಂತಿರುವುದು ಅಹಿಂಸೆಯ ಮೇಲೆ ಮಾತ್ರ, ಆದರೆ ಮಾನವೀಯತೆಯನ್ನು ಮುನ್ನಡೆಸುವ ಆ ಅಹಿಂಸೆಯ ವಿರುದ್ಧವೇ ಈಗ ಕೆಲವರು ದಾಳಿ ನಡೆಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅಮೆರಿಕದ ಬರ್ಕ್ಲಿಯಲ್ಲಿನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಬೆಳಗ್ಗೆ ಅವರು ಭಾಷಣ ಮಾಡಿದರು. ಭಾರತದಲ್ಲಿ ಸಮಕಾಲೀನ ಪರಿಸ್ಥಿತಿಗಳ ಕುರಿತು ಅವರು ಉಪನ್ಯಾಸ ನೀಡಿದರು.

ನನ್ನ ವಿರುದ್ಧ ಅಪಪ್ರಚಾರ ನಡೆಸಲು ಪ್ರಧಾನಿಯವರು ಸೋಷಿಯಲ್ ಮೀಡಿಯಾ ಅಭಿಯಾನ ನಡೆಸುತ್ತಿದ್ದಾರೆ. ಇದಕ್ಕಾಗಿ 1000 ಜನರು ಕಂಪ್ಯೂಟರ್ ಮುಂದು ಕೂತು ನನ್ನ ವಿರುದ್ಧ ಬರೆಯುತ್ತಿದ್ದಾರೆ. ಇದೆಲ್ಲಾ ನಡೆಯುತ್ತಿರುವುದು ನಮ್ಮ ದೇಶವನ್ನು ಆಳುತ್ತಿರುವ ವ್ಯಕ್ತಿಯಿಂದ ಎಂದು ನೇರ ಆರೋಪ ಮಾಡಿದರು.

ಕೋಪ, ಹಿಂಸೆ ವಿನಾಶಕ್ಕೆ ಕಾರಣವಾಗುತ್ತದೆ ಎಂದ ರಾಹುಲ್, ರಾಜಕೀಯ ವೈಷಮ್ಯಗಳು ಪತನದತ್ತ ಕೊಂಡೊಯ್ಯುತ್ತವೆ ಎಂದರು. 1984 ರ ಗಲಭೆಗಳನ್ನು ಉಲ್ಲೇಖಿಸಿ ಮಾತನಾಡುತ್ತಾ.. ನ್ಯಾಯಕ್ಕಾಗಿ ಹೋರಾಡುವವರೆಲ್ಲರಿಗೆ ತಾನು ಬೆಂಬಲಿಸುತ್ತೇನೆ, ಹಿಂಸೆಯನ್ನು ಖಂಡಿಸುತ್ತೇನೆ ಎಂದರು. ತನ್ನ ತಂದೆ ರಾಜೀವ್ ಗಾಂಧಿ, ಅಜ್ಜಿ ಇಂದಿರಾಗಾಂಧಿಗಳನ್ನು ಬಲಿ ತೆಗೆದುಕೊಂಡಿದ್ದು ಹಿಂಸೆಯೇ, ಅದು ಹೇಗಿರುತ್ತದೆ ಎಂದು ನನಗೆ ಮಾತ್ರ ಗೊತ್ತು ಎಂದು ಹೇಳಿದರು.

ಎಡಪಕ್ಷ, ಎಡಪಕ್ಷರಹಿತ ದೇಶಗಳಲ್ಲಿ ಭಾರತ ಯಾವ ಕಡೆ ನಿಲ್ಲುತ್ತದೆ ಎಂಬ ಪ್ರಶ್ನೆಗೆ ನಮ್ಮದು ನೇರ ನಿಲುವು ಎಂದು ಇಂದಿರಾಗಾಂಧಿ ಹೇಳುತ್ತಿದ್ದರು ಎಂದು ರಾಹುಲ್ ನೆನಪಿಸಿಕೊಂಡರು. ಆರ್ಥಿಕ ಸಲಹೆಗಾರರು, ಜನಪ್ರತಿನಿಧಿಗಳೊಂದಿಗೆ ಚರ್ಚಿಸದೆ ನೋಟು ರದ್ದುಗೊಳಿಸಿದ ಕ್ರಮ ಆರ್ಥಿಕ ನಷ್ಟವನ್ನು ಉಂಟು ಮಾಡುತ್ತವೆ ಎಂದು ಅಭಿಪ್ರಾಯಪಟ್ಟರು.

ತಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಕಾಶ್ಮೀರದಲ್ಲಿ ಶಾಂತಿ ನೆಲೆಸಿತ್ತು, ಉಗ್ರರ ಜಾಡು ಇರಲಿಲ್ಲ. ಮೋದಿ ಆಡಳಿತದಲ್ಲಿ ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ ಹೆಚ್ಚಾಗುತ್ತಿವೆ. ಮಾಹಿತಿ ಹಕ್ಕು ಕಾಯ್ದೆಯನ್ನು ಕೇಂದ್ರ ಸರ್ಕಾರ ತನ್ನ ಹಿಡಿತದಲ್ಲಿಟ್ಟುಕೊಂಡಿದ್ದು, ಸರ್ಕಾರದ ತಪ್ಪುಗಳನ್ನು ಭ್ರಷ್ಟಾಚಾರಗಳನ್ನು ದೇಶಕ್ಕೆ ತಿಳಿಸಬೇಕೆಂಬ ಕಾಂಗ್ರೆಸ್ ಪ್ರಯತ್ನಕ್ಕೆ ಅಡ್ಡಿಯಾಗಿದೆ ಎಂದು ಇದೇ ಸಂದರ್ಭದಲ್ಲಿ ರಾಹುಲ್ ಆರೋಪಿಸಿದರು.

Get Latest updates on WhatsApp. Send ‘Add Me’ to 8550851559

Click for More Interesting News

Loading...
error: Content is protected !!