ಬಿಜೆಪಿ ಸಂಸದನ ಮೇಲೆ ಟಿಎಂಸಿ ಕಾರ್ಯಕರ್ತರಿಂದ ಹಲ್ಲೆ

ಕೋಲ್ಕತಾ: ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸಂಸದರೊಬ್ಬರ ಕಾರನ್ನು ತಡೆದು ಹಲ್ಲೆ ನಡೆಸಿದ್ದಾರೆ. ಪಶ್ಚಿಮ ಬಂಗಾಳದ ಕಲ್ನಾದಲ್ಲಿ ಶನಿವಾರ ಈ ಘಟನೆ ನಡೆದಿದೆ. ಬಿಜೆಪಿ ಸಂಸದ ಜಾರ್ಜ್ ಬೇಕರ್ ತಮ್ಮ ಟೊಯೋಟಾ ಕಾರಿನಲ್ಲಿ ಪಕ್ಷದ ಸಮಾವೇಶದಲ್ಲಿ ಭಾಗವಹಿಸಲು ಹೋಗುತ್ತಿದ್ದರು. ಅವರ ಕಾನ್ವಾಯ್ ಬುದ್ವಾನ್ ನಲ್ಲಿ ನಡೆಯುತ್ತಿದ್ದ ಸಮಾವೇಶದ ಆವರಣಕ್ಕೆ ಹೋಗುತ್ತಿದ್ದಾಗ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅತಿರೇಕದಿಂದ ವರ್ತಿಸಿದ್ದ ಬೇಕರ್ ಕಾರನ್ನು ಅಡ್ಡಗಟ್ಟಿ ವಾಹನದ ಮೇಲೆ ದಾಳಿ ನಡೆಸಿದರು. ದಾಳಿ ಏಕೆ ನಡೆಸುತ್ತೀರಿ ಎಂದು ಪ್ರಶ್ನಿಸಿದ ಸಂಸದರ ಮೇಲೂ ದಾಳಿ ಹಲ್ಲೆ ನಡೆಸಿದ್ದಾರೆ.

ಪೊಲೀಸರು ಬಂದ ಕೂಡಲೇ ಟಿಎಂಸಿ ಕಾರ್ಯಕರ್ತರು ಅಲ್ಲಿಂದ ಪರಾರಿಯಾದರು. ಸಂಸದ ಬೇಕರ್ ಅವರನ್ನು ಪ್ರಾಥಮಿಕ ಚಿಕಿತ್ಸೆಗೆ ಕಲ್ನಾದಲ್ಲಿನ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ. ತಮ್ಮ ಮೇಲೆ ನಡೆದ ದಾಳಿ ಕುರಿತು ಸಂಸದರು ಪೊಲೀಸರಿಗೆ ದೂರು ನೀಡಿದ್ದಾರೆ. ಮತ್ತೊಂದು ಕಡೆ ತಮ್ಮ ಪಕ್ಷದ ನಾಯಕನ ಮೇಲೆ ಯಾವುದೇ ದಾಳಿ ನಡೆದಿಲ್ಲ ಎಂದು ರಾಜ್ಯ ಬಿಜೆಪಿ ಹೇಳಿದೆ.