ತಾನು ಹಿಂದೂ ಅಥವಾ ಕ್ರೈಸ್ತ ಎಂದು ರಾಹುಲ್ ಮೊದಲು ಸ್ಪಷ್ಟಪಡಿಸಲಿ: ಸ್ವಾಮಿ – News Mirchi

ತಾನು ಹಿಂದೂ ಅಥವಾ ಕ್ರೈಸ್ತ ಎಂದು ರಾಹುಲ್ ಮೊದಲು ಸ್ಪಷ್ಟಪಡಿಸಲಿ: ಸ್ವಾಮಿ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಾನು ಹಿಂದೂ ಅಥವಾ ಕ್ರೈಸ್ತನೇ ಎಂಬ ಕುರಿತು ಸ್ಪಷ್ಟನೆ ನೀಡಬೇಕಿದೆ ಎಂದು ಬಿಜೆಪಿ ಹಿರಿಯ ನಾಯಕ ಮತ್ತು ಸಂಸದ ಸುಬ್ರಮಣ್ಯನ್ ಸ್ವಾಮಿ ಒತ್ತಾಯಿಸಿದ್ದಾರೆ. ಗುಜರಾತ್ ಪ್ರವಾಸದಲ್ಲಿ ರಾಹುಲ್ ಗಾಂಧಿ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮಿ ರಾಹುಲ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಆ ಧೈರ್ಯ ರಾಹುಲ್ ಗಾಂಧಿಗಿದೆಯಾ?

‘ರಾಜಪಥದಲ್ಲಿ ರಾಹುಲ್ ಗಾಂಧಿಗೇಕೆ ಚರ್ಚ್ ಬೇಕು. ಅಲ್ಲಿ ಹೋಗಿ ಅವರು ಪ್ರಾರ್ಥನೆ ಮಾಡುತ್ತಾರೆ, ಈಗ ನೋಡಿದರೆ ಹೀಗೆ ದೇವಸ್ಥಾನಗಳಿಗೆ ಹೋಗುತ್ತಿದ್ದಾರೆ. ತಾನೊಬ್ಬ ಹಿಂದು ಎಂದು ಘೋಷಿಸುವ ಧೈರ್ಯ ರಾಹುಲ್ ಗಾಂಧಿಗಿದೆಯಾ ಎಂದು ಸ್ವಾಮಿ ಪ್ರಶ್ನಿಸಿದ್ದಾರೆ. ರಾಹುಲ್ ಹಲವಾರು ವರ್ಷಗಳಿಂದಲೂ ಕ್ರೈಸ್ತ ಧರ್ಮವನ್ನು ಪಾಲಿಸುತ್ತಿದ್ದಾರೆ. ತನ್ನ ತಂದೆ ರಾಜೀವ್ ಗಾಂಧಿಯಂತೆಯೇ ತಾನೂ ಒಬ್ಬ ಹಿಂದೂ ಧರ್ಮಕ್ಕೆ ಸೇರಿದವನು ಎಂದು ರಾಹುಲ್ ಘೋಷಿಬೇಕು, ಅದುವರೆಗೂ ಆತನನ್ನು ನಂಬಲಾರೆವು ಎಂದು ಸ್ವಾಮಿ ಹೇಳಿದ್ದಾರೆ.

[ಇದನ್ನೂ ಓದಿ: ಭಾರತದಲ್ಲಿ ಪ್ರಾಮಾಣಿಕ ರಾಜಕಾರಣಿಯಾಗಿರುವುದು ತುಂಬಾ ಕಷ್ಟ: ರಾಹುಲ್]

ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಹುಲ್ ಗಾಂಧಿ ಮೂರು ದಿನಗಳ ಗುಜರಾತ್ ಪ್ರವಾಸ ಕೈಗೊಂಡಿರುವುದು ತಿಳಿದದ್ದೇ. ಈ ಸಂದರ್ಭದಲ್ಲಿ ಹಲವು ದೇವಸ್ಥಾನಗಳಿಗೆ ರಾಹುಲ್ ಭೇಟಿ ನೀಡಿದರು. ಇದು ಹಿಂದುತ್ವವಾದಿಗಳಿಗೆ ರಾಹುಲ್ ನೀಡಿದ ತಕ್ಕ ಉತ್ತರ ಎಂದು ಕಾಂಗ್ರೆಸ್ ಬಣ್ಣಿಸಿದ್ದು, ಇದಕ್ಕೆ ಸುಬ್ರಮಣ್ಯ ಸ್ವಾಮಿ ಹೀಗೆ ತಿರುಗೇಟು ನೀಡಿದ್ದಾರೆ.

Get Latest updates on WhatsApp. Send ‘Add Me’ to 8550851559

Loading...