ಕಾಂಗ್ರೆಸ್ ಕಛೇರಿ ಮುತ್ತಿಗೆಗೆ ಯತ್ನ, ಶೋಭಾ ಕರಂದ್ಲಾಜೆ ಪೊಲೀಸ್ ವಶಕ್ಕೆ |News Mirchi

ಕಾಂಗ್ರೆಸ್ ಕಛೇರಿ ಮುತ್ತಿಗೆಗೆ ಯತ್ನ, ಶೋಭಾ ಕರಂದ್ಲಾಜೆ ಪೊಲೀಸ್ ವಶಕ್ಕೆ

ಆರ್.ಎಸ್.ಎಸ್ ನವರು ಉಗ್ರಗಾಮಿಗಳು ಎಂದ ಮುಖ್ಯಮಂತ್ರಿ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ಕಾರ್ಯಕರ್ತರು ತುಮಕೂರಿನಲ್ಲಿ ಕಾಂಗ್ರೆಸ್ ಕಛೇರಿ ಮತ್ತಿಗೆಗೆ ಯತ್ನಿಸಿದರು. ಈ ವೇಳೆ ಪೊಲೀಸರು ಸಂಸದೆ ಶೋಭಾ ಕರಂದ್ಲಾಜೆ ಮತ್ತು ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಆರ್.ಎಸ್.ಎಸ್ ಕುರಿತ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ದಿನೇಶ್ ಗುಂಡೂರಾವ್ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿ, ತಮಕೂರಿನ ಜೂನಿಯರ್ ಕಾಲೇಜು ಮುಂಭಾಗವಿರುವ ಕಾಂಗ್ರೆಸ್ ಕಛೇರಿಗೆ ಬಳಿ ಪ್ರತಿಭಟನೆ ನಡೆಸಿದರು. ಈ ವೇಳೆ ಮುತ್ತಿಗೆ ಹಾಕಲು ಕಾರ್ಯಕರ್ತರು ಯತ್ನಿಸಿದರು.

ಹಾಸನ ಕಲಬುರಗಿಯಲ್ಲೂ ಆಕ್ರೋಶ

ಕಲಬುರಗಿಯಲ್ಲಿ ಬಿಜೆಪಿ ಮುಖಂಡ ಬಿ.ಜಿ.ಪಾಟೀಲ್, ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ನಾರಿಬಾಲ್, ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಮುಂತಾದವರು ಪ್ರತಿಭಟನೆ ನಡೆಸಿದರು. ಹಾಸನದಲ್ಲಿಯೂ ಆರ್.ಎಸ್.ಎಸ್ ನವರನ್ನು ಉಗ್ರಗಾಮಿಗಳಿಗೆ ಹೋಲಿಸಿ ಮಾತನಾಡಿದ ಮುಖ್ಯಮಂತ್ರಿ ಹೇಳಿಕೆ ಖಂಡಿಸಿ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!