ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೆ ಗೆದ್ದಾಗಲೇ ಬಿಜೆಪಿಯ ಸುವರ್ಣಯುಗ : ಅಮಿತ್ ಶಾ – News Mirchi

ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೆ ಗೆದ್ದಾಗಲೇ ಬಿಜೆಪಿಯ ಸುವರ್ಣಯುಗ : ಅಮಿತ್ ಶಾ

ದೇಶದಲ್ಲಿ ಬಿಜೆಪಿಯ ಸುವರ್ಣ ಯುಗ ಇನ್ನೂ ಬಂದಿಲ್ಲ. ಪಂಚಾಯತ್ ನಿಂದ ಪಾರ್ಲಿಮೆಂಟ್ ವರೆಗೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ಪಕ್ಷದ ಸುವರ್ಣಯುಗ ಸಾಧ್ಯ. ಪ್ರತಿ ರಾಜ್ಯದಲ್ಲೂ ನಾವು ಅಧಿಕಾರಕ್ಕೆ ಬರಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಹೇಳಿದ್ದಾರೆ.

ನಮ್ಮ ಗುರಿ ಪಕ್ಷದ ಗೆಲುವು ಮಾತ್ರವಲ್ಲ, ದೇಶದ ಯಶಸ್ಸೂ ಕೂಡಾ ಎಂದು ಹೇಳಿದ ಅಮಿತ್ ಶಾ, ನಾವು ನಮ್ಮ ದೇಶವನ್ನು ಇತರೆ ಎಲ್ಲಾ ದೇಶಗಳಿಗಿಂತ ಉನ್ನತ ಮಟ್ಟಕ್ಕೆ ತಲುಪಿಸಬೇಕು. ಆಗಲೇ ಬಿಜೆಪಿಯ ಸುವರ್ಣಯುಗ ಬಂದಂತಾಗುತ್ತದೆ ಎಂದು ಹೇಳಿದ್ದಾರೆ. [ಜೀಪಿಗೆ ಯುವಕನನ್ನು ಕಟ್ಟಿದ ಪ್ರಕರಣ: ಸೇನೆ ಹೇಳಿದ್ದೇನು? ]

ಮುಂಬರುವ ಹಿಮಾಚಲ ಪ್ರದೇಶ, ಗುಜರಾತ್ ಮತ್ತು ಕರ್ನಾಟಕ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಗೆಲ್ಲಲು ಕಾರ್ಯಕರ್ತರು ಕಠಿಣ ಶ್ರಮ ಹಾಕಬೇಕು, ಇರೋದರಲ್ಲಿ ನಾವು ತೃಪ್ತರಾಗಬಾರದು ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಬಂಗಾಳ ಮತ್ತು ಕೇರಳಗಳಲ್ಲಿ ನಡೆಯುತ್ತಿರುವ ರಾಜಕೀಯ ಪ್ರೇರಿತ ಹಿಂಸಾಚಾರಗಳನ್ನು ಪ್ರಸ್ತಾಪಿಸಿದ ಅಮಿತ್ ಶಾ, ಬಿಜೆಪಿ ಕಾರ್ಯಕರ್ತರನ್ನು ತುಳಿಯಲು ನೋಡಿದಷ್ಟೂ, ಬಿಜೆಪಿ ಕಾರ್ಯಕರ್ತರು ಪುಟಿದೇಳುತ್ತಾರೆ. ನಾವು ಶಾಂತಿ ಮತ್ತು ದೃಢಸಂಕಲ್ಪದಿಂದ ಕೆಲಸ ಮಾಡುತ್ತೇವೆ ಎಂದರು.

Click for More Interesting News

Loading...
error: Content is protected !!