ದನದ ಕೊಟ್ಟಿಗೆಯಲ್ಲಿ ಬಿಜೆಪಿ ಮುಖಂಡನ ಹತ್ಯೆ

ಕೊಯಂಬತ್ತೂರು: ಉತ್ತರ ತಿರುಪೂರಿನ ಬಿಜೆಪಿ ಜಿಲ್ಲಾ ಮುಖಂಡ ಎಸ್.ಮರಿಮುತ್ತು ಎಂಬುವವರು ಶುಕ್ರವಾರ ಬೆಳಗ್ಗೆ ದನದ ಕೊಟ್ಟಿಗೆಯಲ್ಲಿಯೇ ಹತ್ಯೆಯಾಗಿದ್ದಾರೆ. ಬೆಳಗ್ಗೆ ದನದ ಕೊಟ್ಟಿಗೆಗೆ ತೆರಳಿದ್ದ ಮರಿಮುತ್ತು ಹಿಂದಿರುಗಿರಲಿಲ್ಲ. ಹೀಗಾಗಿ ಕುಟುಂಬ ಸದಸ್ಯರು ಹುಡುಕಾಡಿದಾಗ ಕೈಕಟ್ಟಿ ನೇತುಕಾಕಿದ ಸ್ಥಿತಿಯಲ್ಲಿ ದನದ ಕೊಟ್ಟಿಗೆಯಲ್ಲಿ ಪತ್ತೆಯಾಗಿದ್ದಾರೆ.

52 ವರ್ಷದ ಮರಿಮುತ್ತು ಅವರ ದೇಹಕ್ಕೆ ಹಲವು ಗಾಯದ ಗುರುತುಗಳಿವೆ ಎಂದು ಪೊಲೀಸರು ಹೇಳಿದ್ದು, ಇದು ಕೊಲೆ ಎಂದು ಸ್ಪಷ್ಟಪಡಿಸಿದ್ದಾರೆ. ಮೊದಲು ಆತನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿ ನಂತರ ನೇಣುಹಾಕಿರಬಹುದು ಎನ್ನಲಾಗುತ್ತಿದೆ.

English Summary: North tirpur BJP leader was today found allegedly murdered with his body hanging from the ceiling of a shed with hands tied behind his back at nearby Tirupur.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache