ಹಿಂದೂಗಳ ಓಲೈಕೆಗೆ ಮುಂದಾದ ಮಮತಾ ಓಟ್ ಬ್ಯಾಂಕ್ ಗೆ ಬಿಜೆಪಿ ಲಗ್ಗೆ? |News Mirchi

ಹಿಂದೂಗಳ ಓಲೈಕೆಗೆ ಮುಂದಾದ ಮಮತಾ ಓಟ್ ಬ್ಯಾಂಕ್ ಗೆ ಬಿಜೆಪಿ ಲಗ್ಗೆ?

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತಬ್ಯಾಂಕ್ ಆಗಿರುವ ಬ್ರಾಹ್ಮಣ ಸಮುದಾಯವನ್ನು ಸೆಳೆಯುವ ಮಮತಾ ಬ್ಯಾನರ್ಜಿ ತಂತ್ರಕ್ಕೆ ಪ್ರತಿಯಾಗಿ ಬಿಜೆಪಿಯು ತೃಣಮೂಲ ಕಾಂಗ್ರೆಸ್ ಓಟ್ ಬ್ಯಾಂಕ್ ಗೆ ಕನ್ನ ಹಾಕಲು ಮುಂದಾಗಿದೆ. ಇತ್ತೀಚೆಗೆ ತೃಣಮೂಲ ಕಾಂಗ್ರೆಸ್ ಬ್ರಾಹ್ಮಣರ ಅಧಿವೇಶನವನ್ನು ಆಯೋಜಿಸಿತ್ತು. ಈ ಮೂಲಕ ಬಿಜೆಪಿ ಓಟ್ ಬ್ಯಾಂಕ್ ಗೆ ಲಗ್ಗೆ ಹಾಕುವ ಉದ್ದೇಶ ಇದರ ಹಿಂದಿತ್ತು.

ಇಂದು ಕೋಲ್ಕತಾದಲ್ಲಿ ಮುಸ್ಲಿಂ ಅಧಿವೇಶನ ನಡೆಸುವ ಮೂಲಕ ಅಲ್ಪಸಂಖ್ಯಾತರಿಗೆ ಕೇವಲ ತೃಣಮೂಲ ಒಂದೇ ಆಯ್ಕೆಯಲ್ಲ ಎಂಬುದನ್ನು ತೋರಿಸಲು ಬಿಜೆಪಿ ಹೊರಟಿದೆ. ಅಲ್ಪಸಂಖ್ಯಾತರಿಗೆ ಟಿಎಂಸಿ ಒಂದೇ ಆಯ್ಕೆಯಿದೆ ಎಂಬ ತಪ್ಪು ಕಲ್ಪನೆ ಪಶ್ಚಿಮ ಬಂಗಾಳದಲ್ಲಿದೆ ಎಂದು ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅಲಿ ಹುಸೇನ್ ಹೇಳಿದ್ದಾರೆ. ರಾಜ್ಯದಲ್ಲಿ ಪಂಚಾಯ್ತಿ ಚುನಾವಣೆಗಳು ಎದುರಾಗಲಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಅಲ್ಪಸಂಖ್ಯಾತ ಕಾರ್ಯಕರ್ತರು ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕು ಎಂದು ಅಲಿ ಹುಸೇನ್ ಕರೆ ನೀಡಿದ್ದಾರೆ.

ರಾಜ್ಯದಲ್ಲಿನ ಮುಸ್ಲಿಮರಿಗೆ ಬಿಜೆಪಿ ಅತ್ಯುತ್ತಮ ಆಯ್ಕೆಯಾಗಿದೆ ಎಂದು ಹೇಳಿರುವ ಅವರು, ಪ್ರತಿಯೊಬ್ಬರೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಮಾತಿನಲ್ಲಿ ವಿಶ್ವಾಸವಿರಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು. ಮಮತಾ ಬ್ಯಾನರ್ಜಿಯವರು ಪಶ್ಚಿಮ ಬಂಗಾಳವನ್ನು ಮತ್ತಷ್ಟು ಹಿಂದಕ್ಕೆ ಒಯ್ದಿದೆ ಎಂದು ಆರೋಪಿಸಿದ ಅಲಿ ಹುಸೇನ್, ಗುಜರಾತ್ ನಲ್ಲಿ ಅಲ್ಪಸಂಖ್ಯಾತರಿಗೆ ಶೇ.10 ರಷ್ಟು ಮೀಸಲಾತಿಯಿದ್ದರೆ, ಪಶ್ಚಿಮ ಬಂಗಾಳದಲ್ಲಿ ಕೇವಲ ಶೇ.2 ರಷ್ಟಿದೆ ಎಂದು ಹೇಳಿದ್ದಾರೆ.

ಇಷ್ಟು ದಿನ ಅಲ್ಪಸಂಖ್ಯಾತ ಸಮುದಾಯಗಳ ಓಲೈಕೆಯಲ್ಲಿ ತೊಡಗಿದ್ದ ಮಮತಾ ಬ್ಯಾನರ್ಜಿ ಸರ್ಕಾರ, ಇನ್ನು ಮುಂದೆ ತನ್ನ ನಡೆಯನ್ನು ಬದಲಿಸಿ ಹಿಂದೂ ಪರ ಪಕ್ಷವೆಂದು ಬಿಂಬಿಸಿಕೊಳ್ಳಲು ಮುಂದಾಗುತ್ತಿದೆ.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!