ಉತ್ತರ ಪ್ರದೇಶ ಎಲೆಕ್ಷನ್: ಹೊಸ ಸಮೀಕ್ಷೆ ಏನು ಹೇಳಿದೆ?

ನೋಟು ಅನಾಣ್ಯೀಕರಣ ಸಮಸ್ಯೆಗಳ ನಂತರವೂ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮೋದಿ ನಡೆಯಲಿದೆ ಎಂದು ಟೌಮ್ಸ್ ನೌ – ವಿಎಂಆರ್ ಸಮೀಕ್ಷೆಗಳು ಹೇಳಿವೆ. 403 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ‌ 34 ಶೇಖಡಾವಾರು ಮತಗಳೊಂದಿಗೆ 202 ಸ್ಥಾನಗಳಲ್ಲಿ ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ನಿಲ್ಲಲಿದೆಯಂತೆ.

ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿಕೂಟ 147 ಸ್ಥಾನಗಳಷ್ಟೇ ಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ. ಅಖಿಲೇಶ್ ಮತ್ತು ರಾಹುಲ್ ಗಾಂಧಿ ಮೈತ್ರಿಯ ನಂತರವೂ 31 ಶೇಖಡಾವಾರು ಮತಗಳೊಂದಿಗೆ ಬಿಜೆಪಿ ವಿರುದ್ಧ ಸೋಲು ಕಾಣುತ್ತದೆ. ಹಿಂದಿನ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ಸಮಾಜವಾದಿ ಪಕ್ಷ 105 ಸ್ಥಾನ ಕಳೆದುಕೊಳ್ಳಲಿದೆ.

ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷ 50 ಕ್ಕೂ ಕಡಿಮೆ ಸ್ಥಾನ ಗಳಿಸುವುದರೊಂದಿಗೆ ರೇಸಿನಿಂದಲೇ ಔಟಾಗುತ್ತದೆ ಎನ್ನಲಾಗಿದ್ದು, ಬಿಎಸ್ಪಿ ಹಿಂದಿನ ವಿಧಾನಸಭೆ ಚುನಾವಣೆಗಿಂತ ಈ ಬಾರಿ 33 ಸ್ಥಾನ ಕಳೆದುಕೊಂಡು 47 ಸೀಟು ಗಳಿಸಲಷ್ಟೇ ಸಾಧ್ಯ ಎಂದು ಸಮೀಕ್ಷೆ ಹೇಳಿದೆ. ಇನ್ನು ಅಜಿತ್ ಸಿಂಗ್ ರವರ ಲೋಕದಳ 7 ಸ್ಥಾನಗಳನ್ನು ಪಡೆಯುತ್ತದೆ.

ಸಮೀಕ್ಷೆ ಕೇವಲ ಪಕ್ಷಗಳ ಬಲಾಬಲ ಮಾತ್ರವಲ್ಲದೆ, ನೋಟು ರದ್ದಾದ ನಂತರ ಜನರ ಪ್ರತಿಕ್ರಿಯೆಗಳನ್ನು ದಾಖಲಿಸಿಕೊಂಡಿದ್ದಾರೆ. ನೋಟು ಬ್ಯಾನ್ ಕ್ರಮಕ್ಕೆ ಈಗಲೂ ಅಪಾರ ಬೆಂಬಲ ವ್ಯಕ್ತವಾಗಿದೆ. ಸಮೀಕ್ಷೆ ಪ್ರಕಾರ ಶೇ.63.4 ರಷ್ಟು ಜನ ನೋಟು ರದ್ದು ಕ್ರಮಕ್ಕೆ ಬೆಂಬಲಿಸಿದ್ದು, ದೇಶದ ಹಿತದೃಷ್ಟಿಯಿಂದ ಅದೊಂದು ಉತ್ತಮ ತೀರ್ಮಾನ ಎಂದು ಹೇಳಿದ್ದಾರೆ.

English Summary: Times Now-VMR survey predicts BJP as the clear winner in the UP Assembly polls as it is seen emerging as the single largest party. According to survey, BJP will win 202 seats in the 403-member assembly and will garner a vote-share of 34%.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache