murder

ಬಿಜೆಪಿ ನಾಯಕಿ ಜಮೀಲಾ ಖಾನ್ ಗೆ ಗುಂಡಿಕ್ಕಿ ಹತ್ಯೆ

ಭೋಪಾಲ್: ಮಧ್ಯಪ್ರದೇಶ ರಾಜಧಾನಿ ಭೋಪಾಲದಲ್ಲಿ ಬಿಜೆಪಿ ಮಹಿಳಾ ವಿಭಾಗದ ನಾಯಕಿ ಜಮೀಲಾ ಖಾನ್ ರವರನ್ನು ದಾರುಣವಾಗಿ ಹತ್ಯೆ ಮಾಡಲಾಗಿದೆ. ಕೆಲ ಅಪರಿಚಿತ ವ್ಯಕ್ತಿಗಳು ಆಕೆಗೆ ಗುಂಡು ಹಾರಿಸಿ ಕೊಂದಿದ್ದಾರೆ.

ಇಂದಿರಾ ಸಾಹಿತ್ಯ ನಗರದ ಆಕೆಯ ನಿವಾಸದಲ್ಲೇ ಆಕೆಯನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮನೆಯಿಂದ ಹೊರಬಂದ ಆಕೆಯ ಮಗ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ಆಕೆ ಸಾವನ್ನಪ್ಪಿದ್ದಾಗಿ ವೈದ್ಯರು ಹೇಳಿದ್ದಾರೆ.

ಮನೆಯಲ್ಲಿ ಅಷ್ಟೊಂದು ಜನರಿದ್ದರೂ, ಗುಂಡಿನ ಸದ್ದು ಯಾರಿಗೂ ಕೇಳಿಸದಿದ್ದುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related Post

error: Content is protected !!