ಗೌರಿ ಲಂಕೇಶ್ ಹತ್ಯೆಗೆ ಸಂಘಪರಿವಾವನ್ನು ದೂರಿದ ರಾಮಚಂದ್ರ ಗುಹಾ: ಕ್ಷಮೆಯಾಚನೆಗೆ ಗಡುವು ನೀಡಿದ ಬಿಜೆಪಿ – News Mirchi

ಗೌರಿ ಲಂಕೇಶ್ ಹತ್ಯೆಗೆ ಸಂಘಪರಿವಾವನ್ನು ದೂರಿದ ರಾಮಚಂದ್ರ ಗುಹಾ: ಕ್ಷಮೆಯಾಚನೆಗೆ ಗಡುವು ನೀಡಿದ ಬಿಜೆಪಿ

ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಗೆ ಸಂಬಂಧಿಸಿಂದಂತೆ ಸಂಘ ಪರಿವಾರದ ವಿರುದ್ಧ ಹೇಳಿಕೆ ನೀಡಿದ ಇತಿಹಾಸಕಾರ ರಾಮಚಂದ್ರ ಗುಹಾ ಅವರಿಗೆ ಬಿಜೆಪಿ ಯುವ ಮೋರ್ಚಾ ಲೀಗಲ್ ನೋಟೀಸ್ ಕಳುಹಿಸಿದೆ.

ಸಂಘಪರಿವಾರ ವಿರುದ್ಧದ ಹೇಳಿಕೆಗಾಗಿ ರಾಮಚಂದ್ರ ಗುಹಾ ಮೂರು ದಿನಗಳಲ್ಲಿ ಕ್ಷಮೆಯಾಚಿಸಬೇಕು ಇಲ್ಲವೇ ಕಾನೂನು ಕ್ರಮಗಳನ್ನು ಎದುರಿಸಬೇಕು ಕರ್ನಾಟಕ ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಕರುಣಾಕರ ಖಾಸಲೆ ಅವರು ಎಚ್ಚರಿಸಿದ್ದಾರೆ.

ದಾಬೋಲ್ಕರ್, ಪನ್ಸಾರೆ ಮತ್ತು ಕಲ್ಬುರ್ಗಿಯವರನ್ನು ಹತ್ಯೆಗಳಲ್ಲಾದಂತೆ, ಗೌರಿ ಲಂಕೇಶ್ ಅವರ ಹಂತಕರೂ ಸಂಘಪರಿವಾರದಿಂದ ಬಂದಿರುವ ಸಾಧ್ಯತೆ ಇದೆ ಎಂದು ಸಂದರ್ಶನವೊಂದರಲ್ಲಿ ರಾಮಚಂದ್ರ ಗುಹಾ ಹೇಳಿದ್ದರು.

ಮತ್ತೊಂದು ಆಂಗ್ಲ ಪತ್ರಿಕೆಗೆ ಬರೆದ ಲೇಖನವೊಂದರಲ್ಲಿ ಬಿಜೆಪಿ ಮತ್ತು ಆರ್.ಎಸ್.ಎಸ್ ವಿರುದ್ಧ ಬರೆದಿದ್ದ ಗುಹಾ, ಬಿಜೆಪಿ ಮತ್ತು ಆರ್.ಎಸ್.ಎಸ್ ನೇರ ಕೈವಾಡ ಇಂತಹ ಹತ್ಯೆಗಳಲ್ಲಿ ಇಲ್ಲದಿದ್ದರೂ, ಇಂತಹ ಹತ್ಯೆಗಳಿಗೆ ಪ್ರಚೋದಿಸುವಂತೆ ಆಡಳಿತ ಪಕ್ಷ ದ್ವೇಷದ ವಾತಾವರಣವನ್ನು ಸೃಷ್ಟಿಸಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಬರೆದಿದ್ದರು.

ಸಂಘಪರಿವಾರದ ವಿರುದ್ಧ ರಾಮಚಂದ್ರ ಗುಹಾ ಮಾಡಿರುವ ಆಧಾರ ರಹಿತ ಆರೋಪಗಳು ತಮಗೆ ಶಾಕ್ ನೀಡಿದೆ ಎಂದು ಖಾಸಲೆ ಹೇಳಿದ್ದಾರೆ.

Get Latest updates on WhatsApp. Send ‘Add Me’ to 8550851559

Loading...