ಬಿಜೆಪಿ ಗೆಲುವು 70 ವರ್ಷಗಳಿಂದ ಮುಸ್ಲಿಮರನ್ನು ವಂಚಿಸಿದವರಿಗೆ ಪಾಠ: ಓವೈಸಿ |News Mirchi

ಬಿಜೆಪಿ ಗೆಲುವು 70 ವರ್ಷಗಳಿಂದ ಮುಸ್ಲಿಮರನ್ನು ವಂಚಿಸಿದವರಿಗೆ ಪಾಠ: ಓವೈಸಿ

ಉತ್ತರಪ್ರದೇಶದಲ್ಲಿ ಬಿಜೆಪಿಯ ಗೆಲುವು 70 ವರ್ಷಗಳಿಂದ ಮುಸ್ಲಿಮರನ್ನು ವಂಚಿಸಿದ ಪಕ್ಷಗಳಿಗೆ ತಕ್ಕ ಪಾಠವಾಗಿದೆ ಎಂದು ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಪರೋಕ್ಷವಾಗಿ ಬಿಜೆಪಿಗೆ ಸಹಾಯ ಮಾಡಿದ್ದಾಗಿ ಬಂದ ಆರೋಪಗಳಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಓವೈಸಿ, ಉತ್ತರಖಂಡ ಮತ್ತು ಒಡಿಶಾ ಗಳಲ್ಲಿ ತಮ್ಮ ಪಕ್ಷ ಸ್ಪರ್ಧಿಸಲಿಲ್ಲ, ಆದರೆ ಅಲ್ಲೂ ಯಾಕೆ ಇತರೆ ಪಕ್ಷಗಳು ಸೋಲುಂಡವು ಎಂದು ಪ್ರಶ್ನಿಸಿದರು.

ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಆಯ್ಕೆ ಕುರಿತು ಕೇಳಿದ ಪ್ರಶ್ನೆಗೆ “ಯಾರೇ ಮುಖ್ಯಮಂತ್ರಿಯಾದರೂ ಸಂವಿಧಾನ ಮತ್ತು ಕಾನೂನಿಗೆ ಬದ್ಧವಾಗಿರಬೇಕು” ಎಂದರು.

Loading...
loading...
error: Content is protected !!