ಬ್ಲೂವೇಲ್ ಗೇಮ್ ಗೆ ತಮಿಳುನಾಡು ವಿದ್ಯಾರ್ಥಿ ಬಲಿ

ಅಪಾಯಕಾರಿ ಆನ್ಲೈನ್ ಗೇಮ್ “ಬ್ಲೂವೇಲ್ ಚಾಲೆಂಜ್” ಗೆ ತಮಿಳುನಾಡಿನ ವಿದ್ಯಾರ್ಥಿಯೊಬ್ಬ ಬಲಿಯಾಗಿದ್ದಾನೆ. ಚೆನ್ನೈನ 19 ವರ್ಷದ ವಿದ್ಯಾರ್ಥಿ ವಿಘ್ನೇಶ್ ಬುಧವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಧುರೈನಲ್ಲಿನ ಮನ್ನಾರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಆತನ ಕೈ ಮೇಲೆ ತಿಮಿಂಗಿಲದ ಚಿತ್ರವಿದೆ. ಅದರ ಅಡಿಯಲ್ಲಿ ಬ್ಲೂವೇಲ್ ಎಂದು ಬರೆದಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಸಂಜೆ 4:40 ರ ವೇಳೆ ಆತ ನೇಣು ಬಿಗಿದ ಸ್ಥಿತಿಯಲ್ಲಿ ಕಂಡ ವಿಘ್ನೇಶ್ ಬರೆದ ಪತ್ರವೂ ಸಿಕ್ಕಿದೆ. “ಬ್ಲೂ ವೇಲ್.. ಇದು ಆಟವಲ್ಲ ಡೇಂಜರ್.. ಒಮ್ಮೆ ಒಳಹೊಕ್ಕರೆ ಹೊರಗೆ ಬರಲಾರೆ” ಎಂದು ಬರೆದಿದೆ.

ವಿಘ್ನೇಶ್ ತನ್ನ ಫೋನ್ ನಲ್ಲಿ ಬ್ಲೂವೇಲ್ ಚಾಲೆಂಜ್ ಗೇಮ್ ಗಾಗಿ ಪ್ರಯತ್ನಿಸುತ್ತಿಸುತ್ತಿದ್ದ ಎಂದು ಆತನ ಸ್ನೇಹಿತರು ಹೇಳಿದ್ದಾರೆ. ಬ್ಲೂವೇಲ್ ಚಾಲೆಂಜ್ ಗೇಮ್ ಗಾಗಿ ಆಪ್ ಅಥವಾ ವೆಬ್ಸೈಟ್ ಇಲ್ಲದ ಹಿನ್ನೆಲೆಯಲ್ಲಿ ಮಸೇಜ್ ಗಳು, ಫೋನ್ ಕರೆಗಳ ಮೂಲಕ ಆತ ಬ್ಲೂವೇಲ್ ಆಡಲು ಯತ್ನಿಸಿದ್ದ. ಕ್ಯೂರೇಟರ್ ಮೂಲಕ ಆತನಗೆ ಟಾಸ್ಕ್ ಗಳು ತಲುಪುತ್ತಿದ್ದವು ಎಂದು ಆತನ ಆಪ್ತರು ಹೇಳಿದ್ದಾಋಎ.ಈ ಮಾಹಿತಿಯನ್ನು ಆಧರಿಸಿ ತಮಿಳುನಾಡಿನಲ್ಲಿ ಬ್ಲೂವೇಲ್ ಚಾಲೆಂಜ್ ಗೇಮ್ ಗೆ ಬಲಿಯಾದ ಮೊದಲ ಪ್ರಕರಣವಿದು ಎಂದು ಹೇಳುತ್ತಿದ್ದಾರೆ.

ಬ್ಲೂವೇಲ್ ಚಾಲೆಂಜ್ ಗೇಮ್ ವಿರುದ್ಧ ತಮಿಳುನಾಡು ಪೊಲೀಸರು ಈಗಾಗಲೇ ಪೋಷಕರನ್ನು ಎಚ್ಚರಿಸಿದ್ದಾರೆ. ಕಂಪ್ಯೂಟರ್ ಗಳು, ಮೊಬೈಲ್ ಫೋನ್ ಗಳನ್ನು ಬಳಸುವ ಮಕ್ಕಳ ಮೇಲೆ ನಿಗಾವಹಿಸುವಂತೆ ಸೂಚಿಸಿದ್ದಾರೆ.

[ಇದನ್ನೂ ಓದಿ:ಸೂಸೈಡ್ ಗೇಮ್ ಭಾರತಕ್ಕೂ ಕಾಲಿಟ್ಟಿದೆ, ನಿಮ್ಮ ಮಕ್ಕಳ ಬಗ್ಗೆ ಎಚ್ಚರ]

ಬ್ಲೂವೇಲ್ ಚಾಲೆಂಜ್ ಎನ್ನುವುದೊಂದು ಆನ್ಲೈನ್ ಗೇಮ್. ಇದಕ್ಕೆ ರಿಜಿಸ್ಟರ್ ಆದವರು 50 ದಿನಗಳ ಕಾಲ ಪ್ರತಿ ದಿನ ಒಂದಿಲ್ಲೊಂದು ಚಾಲೆಂಜ್ ಅನ್ನು ಸ್ವೀಕರಿಸಬೇಕು. ಮಾಡಿದ ಪ್ರತಿ ಟಾಸ್ಕ್ ನ ಫೋಟ ಅಥವಾ ವೀಡಿಯೋ ಸಾಕ್ಷಿಗಳನ್ನು ತೋರಿಸಬೇಕು. ಆಟದ ಆರಂಭದಲ್ಲಿ ಸಣ್ಣ ಸಣ್ಣ ಚಾಲೆಂಜ್ ಗಳು ನೀಡುತ್ತಾರೆ. ಆದರೆ, ದಿನ ಕಳೆಯುತ್ತಿದ್ದಂತೆ ವಿಚಿತ್ರ ಹಾಗೂ ಅಪಾಯಕಾರಿ ಟಾಸ್ಕ್ ಗಳನ್ನು ನೀಡಲಾಗುತ್ತದೆ. ಮುಂಜಾನೆ ಬೇಗ ಎದ್ದು ಭಯಾನಕ ಚಲನಚಿತ್ರಗಳನ್ನು ನೋಡುವುದು, ಕೈಗಳನ್ನು ಬ್ಲೇಡಿನಿಂದ ಕುಯ್ದುಕೊಳ್ಳುವುದು ಮುಂತಾದ ಟಾಸ್ಕ್ ಗಳನ್ನು ನೀಡುತ್ತಾ, ಕೊನೆಯ ಟಾಸ್ಕ್ ಗಳಲ್ಲಿ ಕಟ್ಟಡಗಳಿಂದ ಜಿಗಿಯುವುದು, ನೇಣು ಹಾಕಿಕೊಳ್ಳುವುದು ಮುಂತಾದ ಚಾಲೆಂಜ್ ನೀಡುವ ಮೂಲಕ ಆಟಗಾರನ ಜೀವ ತೆಗೆಯುತ್ತದೆ.