ಶಿಯಾ ಮುಸ್ಲಿಮರನ್ನು ಗುರಿಯಾಗಿಸಿ ಬಾಂಬ್ ಸ್ಪೋಟ, 20 ಸಾವು

ಪೇಶಾವರ: ಪಾಕಿಸ್ತಾನದ ವಾಯುವ್ಯ ಬುಡಕಟ್ಟು ಪ್ರಾಂತ್ಯದ ಜನನಿಬಿಡ ಮಾರುಕಟ್ಟೆಯಲ್ಲಿ ಪ್ರಬಲ ಬಾಂಬ್ ಸ್ಪೋಟಗೊಂಡು 20 ಜನ ಸಾವನ್ನಪ್ಪಿದ್ದಾರೆ. ಸುಮಾರು 40 ಜನ ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಶಿಯಾಗಳ ಪ್ರಾಬಲ್ಯವಿರುವ ಈ ಪ್ರಾಂತ್ಯದಲ್ಲಿ ಶಿಯಾ ಮುಸ್ಲಿಮರನ್ನೇ ಗುರಿಯಾಗಿಸಿ ಉಗ್ರರು ಈ ದಾಳಿ ನಡೆಸಿದ್ದಾರೆ.

ಕುರ್ರಂ ಜಿಲ್ಲಾ ಕೇಂದ್ರವಾದ ಪರಾಚಿನಾರ್ ನಗರದ ತರಕಾರಿ ಮಾರುಕಟ್ಟೆಯಲ್ಲಿ ಈ ಬಾಂಬ್ ಸ್ಪೋಟ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದಾಳಿಯಲ್ಲಿ 20 ಜನ ಸಾವನ್ನಪ್ಪಿದ್ದು, ಗಾಯಾಳುಗಳನ್ನು ಮಿಲಿಟರಿ, ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

A bomb exploded Saturday in a market in a northwest tribal region that borders Afghanistan, killing 20 people and wounding at least 40, officials said. The bombing took place in a predominantly Shiite area of Kurram.