ಜಯಾ ಚಿಕಿತ್ಸೆ ಪಡೆದ ಅಪೋಲೋ ಆಸ್ಪತ್ರೆಗೆ ಬಾಂಬ್ ಬೆದರಿಕೆ |News Mirchi

ಜಯಾ ಚಿಕಿತ್ಸೆ ಪಡೆದ ಅಪೋಲೋ ಆಸ್ಪತ್ರೆಗೆ ಬಾಂಬ್ ಬೆದರಿಕೆ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಚಿಕಿತ್ಸೆ ಪಡೆಯುತ್ತಾ ನಿಧನರಾದ ಚೆನ್ನೈನ ಅಪೊಲೋ ಆಸ್ಪತ್ರೆಗೆ ಗುರುವಾರ ಕಿಡಿಗೇಡಿಗಳಿಂದ ಬಾಂಬ್ ಬೆದರಿಕೆ ಕರೆ ಬಂದಿದೆ. ಕೂಡಲೇ ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ಆಸ್ಪತ್ರೆಯನ್ನೆಲ್ಲಾ ಪರಿಶೀಲಿಸುತ್ತಿದೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಜಯಲಲಿತ, 74 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ನಿಧನರಾಗಿದ್ದರು. ಜಯಲಲಿತ ನಿಧನದ ಸುದ್ದಿಯ ಘೋಷಣೆ ಮತ್ತು ಚಿಕಿತ್ಸೆ ವಿಷಯದಲ್ಲಿ ಕೆಲವು ಅನುಮಾನಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಅಪೊಲೋ ಆಸ್ಪತ್ರೆಗೆ ಬೆದರಿಕೆ ಕರೆ ಬಂದಿರುವುದು ಗಮನಾರ್ಹ.

  • No items.

Loading...
loading...
error: Content is protected !!