ಬಿಜೆಪಿ ತೊಲಗಿಸಿ ರ್ಯಾಲಿಗೆ ಸೋನಿಯಾ, ದೇವೇಗೌಡ : ಲಾಲೂ – News Mirchi

ಬಿಜೆಪಿ ತೊಲಗಿಸಿ ರ್ಯಾಲಿಗೆ ಸೋನಿಯಾ, ದೇವೇಗೌಡ : ಲಾಲೂ

ಆಗಸ್ಟ್ 27 ರಂದು “ಬಿಜೆಪಿ ತೊಲಗಿಸಿ, ದೇಶ ರಕ್ಷಿಸಿ” ರ್ಯಾಲಿಯನ್ನು ಜೆಡಿಯು ಪಕ್ಷವು ವತಿಯಿಂದ ಪಾಟ್ನಾದಲ್ಲಿ ಆಯೋಜಿಸುತ್ತಿದೆ. ರ್ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಬಿಎಸ್ಪಿ ನಾಯಕಿ ಮಾಯಾವತಿ ಮತ್ತು ಎಡಪಕ್ಷಗಳ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ.

ಆದರೆ ಬಿಹಾರದ ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷವಾಗಿರುವ ಜೆಡಿಯು ಮುಖಂಡ, ಮುಖ್ಯಮಂತ್ರಿ ನಿತೀಶ್ ಕುಮಾರ್ ರ್ಯಾಲಿಯಿಂದ ದೂರವುಳಿಯಲಿದ್ದಾರೆ ಎನ್ನಲಾಗುತ್ತಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಆರಂಭದಲ್ಲಿ ಪ್ರತಿಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದ ನಿತೀಶ್, ನಂತರ ಬಿಜೆಪಿ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದರು.

Loading...