ಸುಖೋಯ್ ನಿಂದ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ

ಭಾರತದ ಬತ್ತಳಿಕೆಯಲ್ಲಿ ಬ್ರಹಾಸ್ತ್ರಾದ ಬ್ರಹ್ಮೋಸ್ ಕ್ಷಿಪಣಿಯ ಅತ್ಯಾಧುನಿಕ ವರ್ಷನ್ ಅನ್ನು ಮೊದಲ ಬಾರಿಗೆ ಸುಖೋಯ್ ಯುದ್ಧ ವಿಮಾನದಿಂದ ಈ ವಾರ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಲಿದ್ದಾರೆ. ಈ ಪರೀಕ್ಷ ಯಶಸ್ವಿಯಾದರೆ ಸರ್ಜಿಕಲ್ ದಾಳಿಗಳಲ್ಲಿ ಈ ಅತ್ಯಾಧುನಿಕ ಕ್ಷಿಪಣಿ ಬ್ರಹ್ಮೋಸ್ ಭಾರತಕ್ಕೆ ಬೆನ್ನೆಲುಬಾಗಲಿದೆ. ಸುಖೋಯ್ ಫೈಟರ್ ಜೆಟ್ ನಿಂದ ಬ್ರಹ್ಮೋಸ್ ಪರೀಕ್ಷೆ ಅತ್ಯುತ್ತಮ ಕಾಂಬಿನೇಷನ್ ಎಂದು ತಜ್ಞರು ಬಣ್ಣಿಸುತ್ತಿದ್ದಾರೆ.

ವಾಯುಪ್ರದೇಶಗಳಲ್ಲಿ ಗುರಿಗಳನ್ನು ಭೇದಿಸುವ ಬ್ರಹ್ಮೋಸ್ ಕ್ಷಿಪಣಿಗಳನ್ನು ವಿರೋಧಿ ಭೂಭಾಗದಲ್ಲಿನ ಉಗ್ರರ ಶಿಬಿರಗಳನ್ನು ಗುರುತಿಸಿ ಕಣ್ಮುಚ್ಚಿ ತೆರೆಯುವುದರೊಳಗೆ ನಾಶ ಮಾಡುವುದರೊಂದಿಗೆ, ಪರಮಾಣು ಬಂಕರ್ ಗಳು, ಕಮ್ಯಾಂಡ್ ಕಂಟ್ರೋಲ್ ಸೆಂಟರ್, ಸಮುದ್ರದ ಮೇಲಿನ ಯುದ್ಧ ವಿಮಾನಗಳಂತಹ ಸೈನಿಕ ಗುರಿಗಳನ್ನು ಲೀಲಾಜಾಲವಾಗಿ ಧ್ವಂಸಗೊಳಿಸುತ್ತವೆ ಎನ್ನುತ್ತಿದ್ದಾರೆ.

ಕಳೆದ 10 ವರ್ಷಗಳಿಂದ 290 ಕಿ.ಮೀ ದೂರದ ಗುರಿಗಳನ್ನು ಭೇದಿಸಬಲ್ಲ, ಬ್ರಹ್ಮೋಸ್ ಕ್ಷಿಪಣಿಗಳನ್ನು ಶಸ್ತ್ರಾಸ್ತ್ರ ಪಡೆಗಳು ಸಂಗ್ರಹಿಸಿವೆ. ಮತ್ತೊಂದು ಕಡೆ ಸೇನೆ, ವಾಯುಪಡೆ, ನೌಕಾಪಡೆಗಳು ಬ್ರಹ್ಮೋಸ್ ಗಾಗಿ ರೂ.27,150 ಕೋಟಿ ಮೌಲ್ಯದ ಬೇಡಿಕೆಯಿಟ್ಟಿರುವುದು ಭಾರತೀಯ ಸೇನೆಗಳು ಈ ಕ್ಷಿಪಣಿಗಳ ಮೇಲೆ ಅದೆಷ್ಟು ನಂಬಿಕೆ ಇಟ್ಟಿದೆ ಎಂದು ಸಾಬೀತುಪಡಿಸುತ್ತಿದೆ.

Get Latest updates on WhatsApp. Send ‘Add Me’ to 8550851559