ತಾಳಿ ಕಟ್ಟಿದ ನಂತರ ಪ್ರಿಯಕರನೊಂದಿಗೆ ವಧು ಪರಾರಿ, ಮದುವೆಗೆ ಬಂದವರೊಂದಿಗೆ ಮಧುಮಗ ಸಂಭ್ರಮಾಚರಣೆ! – News Mirchi

ತಾಳಿ ಕಟ್ಟಿದ ನಂತರ ಪ್ರಿಯಕರನೊಂದಿಗೆ ವಧು ಪರಾರಿ, ಮದುವೆಗೆ ಬಂದವರೊಂದಿಗೆ ಮಧುಮಗ ಸಂಭ್ರಮಾಚರಣೆ!

ತನಗಿಷ್ಟವಿಲ್ಲದ ಮದುವೆ ಮಾಡಿದ ಕೆಲವೇ ಕ್ಷಣಗಳಲ್ಲಿ ಯುವತಿ ಬಂಧುಬಳಗಕ್ಕೆ ಶಾಕ್ ನೀಡಿದ್ದಾಳೆ. ಕಲ್ಯಾಣ ಮಂಟಪಕ್ಕೆ ಬಂದ ಪ್ರಿಯಕರನೊಂದಿಗೆ ಹೊರನಡೆದಿದ್ದಾಳೆ. ಈ ಘಟನೆ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ನಡೆದಿದೆ. ಬಂಧೂ ಬಳಗವೆಲ್ಲಾ ಶಾಕ್ ನಲ್ಲಿದ್ದರೆ, ವರ ಮಾತ್ರ ಕೇಕ್ ಕಟ್ ಮಾಡಿ ಸಂಭ್ರಮಾಚರಣೆ ಮಾಡಿಕೊಂಡಿದ್ದಾರೆ.

ತ್ರಿಶೂರ್ ನಲ್ಲಿ ಮುಲ್ಲಸ್ಸೆರಿಯ ಯುವತಿಗೆ ಗುರುವಾಯೂರಿನ ಶ್ರೀಕೃಷ್ಣ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಮದುವೆ ನಿಶ್ಚಯವಾಗಿತ್ತು. ಕಳೆದ ಭಾನುವಾರ ಜುಲೈ 31 ರಂದು ವಧೂವರರ ಬಂಧುಗಳೊಂದಿಗೆ ಮದುವೆ ಕಾರ್ಯ ನಿರ್ವಿಘ್ನವಾಗಿ ನೆರವೇರುತ್ತಿತ್ತು.

ಮುಹೂರ್ತ ಸಮಯಕ್ಕೆ ಸರಿಯಾಗಿ ವಧುವಿನ ಕೊರಳಿಗೆ ತಾಳಿಯೂ ಬಿತ್ತು. ಅಷ್ಟರಲ್ಲಿ ವಧುವಿಗೆ ಆಕೆಯ ಪ್ರಿಯಕರ ಕಣ್ಣಿಗೆ ಬಿದ್ದಿದ್ದಾನೆ. ಅಷ್ಟೇ ಕುತ್ತಿಗೆಯಲ್ಲಿದ್ದ ತಾಳಿಯನ್ನು ಕಿತ್ತು ಪ್ರಿಯಕರನೊಂದಿಗೆ ವಧು ಪರಾರಿಯಾಗಿದ್ದಾಳೆ. ಇದರಿಂದಾಗಿ ವರನ ಕುಟುಂಬದವರು ವಧುವಿನ ಕುಟುಂಬದವರೊಂದಿಗೆ ಜಗಳಕ್ಕಿಳಿದಿದ್ದಾರೆ. ನಿಮ್ಮ ಮಗಳಿಂದ ನಮಗೆ ಮರ್ಯಾದೆ ಹೋಯಿತು, 15 ಲಕ್ಷ ರೂಪಾಯಿ ನಷ್ಟ ಪರಿಹಾರ ನೀಡಿ ಎಂದು ಒತ್ತಾಯಿಸಿದರು. ಕೊನೆಗೆ 8 ಲಕ್ಷ ರೂಪಾಯಿ ನೀಡಲು ಯುವತಿಯ ಪೋಷಕರು ಒಪ್ಪಿಕೊಂಡರು.

ಬಡತನದ ಕಾರಣಕ್ಕೆ ಅತ್ಯಾಚಾರ ನಡೆಸಿದವನನ್ನೇ ಮದುವೆಯಾದ ಅಪ್ರಾಪ್ತ ಬಾಲಕಿ

ಮದುವೆ ಸಂದರ್ಭದಲ್ಲಿ ಮೊದಲೇ ವರನಿಗೆ ತನ್ನ ನಿರ್ಧಾರದ ಕುರಿತು ಎಚ್ಚರಿಸಿದ್ದಳು ಎಂದೂ ಹೇಳಲಾಗುತ್ತಿದೆ. ತನಗೆ ಈ ಮದುವೆ ಇಷ್ಟವಿಲ್ಲ, ಮನೆಯವರು ಒತ್ತಾಯ ಮಾಡಿ ಈ ಮದುವೆ ಮಾಡಿದ್ದಾರೆ ಎಂದು ವಧು ಪೊಲೀಸರಿಗೆ ತಿಳಿಸಿದ್ದಾಳೆ.

ವಧುವು ಪ್ರಿಯಕರನೊಂದಿಗೆ ಪರಾರಿಯಾಗಿದ್ದರೆ, ವರನು ಸಂತೋಷದಿಂದ ತನ್ನ ಮದುವೆ ನೋಡಲು ಬಂದ ಬಂಧುಗಳು, ಸ್ನೇಹಿತರೊಂದಿಗೆ ಆ ದಿನ ಸಂಜೆ ಕೇಕ್ ಕಟ್ ಮಾಡಿ ಸಂಭ್ರಮಾಚರಣೆ ಮಾಡಿದ್ದಾನೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಫೇಸ್ಬುಕ್, ವಾಟ್ಸಾಪ್ ಗಳಲ್ಲಿ ಪೋಸ್ಟ್ ಆಗಿದ್ದರಿಂದ ವೈರಲ್ ಆಗಿವೆ.

ನಿತೀಶ್ ವಿರುದ್ಧ ಮುನಿಸು, ಹೊಸ ಪಕ್ಷ ಕಟ್ಟುವತ್ತ ಶರದ್ ಯಾದವ್

Loading...