11 ಜನರನ್ನು ಮದುವೆಯಾಗಿ ವಂಚಿಸಿದ ಮಹಿಳೆಯ ಬಂಧನ

ನೋಯ್ಡಾ: ​11 ಜನರನ್ನು ಮದುವೆಯಾಗಿ ಯಾಮಾರಿಸಿ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ ಮಹಿಳೆ ಮತ್ತು ಆಕೆಯ ಇಬ್ಬರು ಸಹಚರರನ್ನು ಕೇರಳ ಪೊಲೀಸರು ನೋಯ್ಡಾ ಪೊಲೀಸರ ನೆರವಿನೊಂದಿಗೆ ಬಂಧಿಸಿದ್ದಾರೆ.

ಮದುವೆಯಾದ ನಂತರ 15 ಲಕ್ಷ ರೂಪಾಯಿ ಮೌಲ್ಯದ ಒಡವೆಗಳೊಂದಿಗೆ ಪರಾರಿಯಾಗಿದ್ದಾಳೆಂದು ಅಕ್ಟೋಬರ್ ನಲ್ಲಿ ಕೊಚ್ಚಿ ನಿವಾಸಿ ಲೊರೆನ್ ಜಸ್ಟಿನ್ ಎನ್ನುವವರು ಪತ್ನಿ ಮೇಘಾ ಭಾರ್ಗವ್ ವಿರುದ್ದ ದೂರು ನೀಡಿದ್ದರು.

ತನಿಖೆ ಕೈಗೊಂಡ ಪೊಲೀಸರಿಗೆ, ಅ ಮಹಿಳೆಯಿಂದ ಮೋಸ ಹೋದವರು ಜಸ್ಟಿನ್ ನಾಲ್ಕನೆಯವರು ಎಂದು ತಿಳಿದು ಬಂದಿದೆ. ಕೇರಳವೊಂದರಲ್ಲೇ 4 ಜನರನ್ನು ಮದುವೆಯಾಗಿ ವಂಚಿಸಿದ್ದ ಮಹಿಳೆ, ಪುಣೆ, ರಾಜಸ್ಥಾನ, ಮುಂಬೈ, ಇಂಧೋರ್ ಹಾಗೂ ಕೇರಳಗಳಲ್ಲಿ ಒಟ್ಟು 11 ಮಂದಿಯನ್ನು ಮದುವೆಯಾಗಿದ್ದಳೆಂದು ಅಧಿಕಾರಿಗಳು ಹೇಳಿದ್ದಾರೆ.

ವಿಚ್ಛೇದಿತರು, ಅಂಗವಿಕಲ ಪುರುಷರನ್ನು ಟಾರ್ಗೆಟ್ ಮಾಡುತ್ತಿದ್ದ ಮಹಿಳೆ, ಅವರನ್ನು ಮದುವೆಯಾಗಿ ಸ್ವಲ್ಪ ದಿನ ಕಳೆದ ನಂತರ ಪತಿ ಮತ್ತಾತನ ಕುಟುಂಬ ಸದಸ್ಯರಿಗೆ ಮತ್ತು ಬರುವ ಔಷಧಿ ಬೆರೆಸಿದ ಆಹಾರ ನೀಡಿ ನಗದು ಮತ್ತು ಒಡವೆಗಳೊಂದಿಗೆ ಪರಾರಿಯಾಗುತ್ತಿದ್ದಳು.

Related News

Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache