ಇಂದು ಬೆಂಗಳೂರಿನಲ್ಲಿ ಬ್ರಿಟನ್ ಪ್ರಧಾನಿ

ಬೆಂಗಳೂರು: ಬ್ರಿಟನ್ ಪ್ರಧಾನಮಂತ್ರಿ ಥೆರೆಸಾ ಮೇ ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೆ 6 ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ.

ಮೊದಲು ಹೋಟೆಲೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ನಂತರ 11:50 ಕ್ಕೆ ಯಲಹಂಕ ಸಮೀಪದ ತರಹುಣಸೇ ಸರ್ಕಾರಿ ಪಾಠಶಾಲೆಗೆ ಭೇಟಿ ನೀಡುತ್ತಾರೆ. ಮಧ್ಯಾಹ್ನ12:05 ಕ್ಕೆ ಡೈನಮಿಕ್ಸ್ ಟೆಕ್ನಾಲಜಿ ಸಂಸ್ಥೆಯ ಕಛೇರಿ ತಲುಪುತ್ತಾರೆ. ರಕ್ಷಣಾ, ವೈಮಾನಿಕ ಸಂಸ್ಥೆಗಳಿಗೆ ಈ ಕಂಪನಿ ಬಿಡಿಭಾಗಗಳನ್ನು ಸರಬರಾಜು ಮಾಡುತ್ತದೆ. ಬ್ರಿಟನ್ ನಲ್ಲಿಯೂ ಈ ಕಂಪನಿ ಮೂರು ಶಾಖೆಗಳನ್ನು ಹೊಂದಿದೆ. ಸಂಜೆ 3 ಗಂಟೆಗೆ ಮಹಾತ್ಮಾ ಗಾಂಧಿ ರಸ್ತೆ ಬಾರ್ಟನ್ ಸೆಂಟರ್‌ನಲ್ಲಿ ಪ್ರಮುಖರೊಂದಿಗೆ ಸಭೆ ಸೇರಿ ನಂತರ ಹಲಸೂರಿನ ಸೋಮೇಶ್ವರ ದೇವಾಲಯವನ್ನು ಸಂದರ್ಶಿಸಿ ಸಂಜೆ 5 ಗಂಟೆಗೆ ದೆಹಲಿಗೆ ಹೊರಡುತ್ತಾರೆ.