ಕೈಗೂಡುತ್ತಿರುವ ವಿಜಯ್ ಮಲ್ಯಾ ಕರೆತರುವ ಕೇಂದ್ರದ ಪ್ರಯತ್ನ |News Mirchi

ಕೈಗೂಡುತ್ತಿರುವ ವಿಜಯ್ ಮಲ್ಯಾ ಕರೆತರುವ ಕೇಂದ್ರದ ಪ್ರಯತ್ನ

ಮದ್ಯದ ದೊರೆ ವಿಜಯ್ ಮಲ್ಯಾ ಅವರನ್ನು ಭಾರತಕ್ಕೆ ಕರೆತರಲು ವಿದೇಶಾಂಗ ಸಚಿವಾಲಯ ಮಾಡುತ್ತಿರುವ ಪ್ರಯತ್ನಗಳು ಸಫಲವಾಗುತ್ತಿವೆ. ವಿದೇಶಾಂಗ ಸಚಿವಾಲಯ ಮಾಡಿದ್ದ ಮನವಿಯನ್ನು ಬ್ರಿಟನ್ ಸರ್ಕಾರ ಪುರಸ್ಕರಿಸಿದೆ. ಇದಕ್ಕೆ ಸಂಬಂಧಿಸಿದಂತೆ ಯು.ಕೆ ನ್ಯಾಯಾಲಯ ಶೀಘ್ರದಲ್ಲೇ ಮಲ್ಯಾ ವಿರುದ್ಧ ವಾರೆಂಟ್ ಜಾರಿ ಮಾಡುತ್ತದೆ ಎನ್ನಲಾಗುತ್ತಿದೆ. ಕಳೆದ ತಿಂಗಳು ಕೇಂದ್ರ ಸರ್ಕಾರ ಮಾಡಿದ್ದ ಮನವಿಯನ್ನು ಯು.ಕೆ ಸರ್ಕಾರ ಸರ್ಟಿಫೈ ಮಾಡಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಗೋಪಾಲ್ ಬಗ್ಲೇ ಹೇಳಿದ್ದಾರೆ. ವಿದೇಶಾಂಗ ಸಚಿವಾಲಯದ ಮನವಿಯನ್ನು ಯುಕೆಯ ಸರ್ಕಾರಿ ಹಿರಿಯ ಅಧಿಕಾರಿ ಅಲ್ಲಿನ ಜಿಲ್ಲಾ ನ್ಯಾಯಾಲಯಕ್ಕೆ ಕಳುಹಿಸಿದ್ದಾರೆ ಎಂದು ಖಾಸಗಿ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದ್ದಾರೆ.

ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಸಾಲ ಉಳಿಸಿಕೊಂಡು ದೇಶ ಬಿಟ್ಟು ಪರಾರಿಯಾಗಿರುವ ಮಲ್ಯಾ ಮೇಲೆ ಯುಕೆ ಹೈ ಕಮೀಷನ್ ಈಗ ಗಮನಹರಿಸಿದೆ. ಮಲ್ಯಾಗೆ ಸೇರಿದ ಕಿಂಗ್ ಫಿಷರ್ ಏರ್ಲೈನ್ಸ್ ವಿವಿಧ ಬ್ಯಾಂಕುಗಳಿಂದ ಮಾಡಿದ ರೂ.9 ಸಾವಿರ ಕೋಟಿ ಸಾಲವನ್ನು ವಸೂಲಿ ಮಾಡಲು ಈಗಾಗಲೇ ಬ್ಯಾಂಕುಗಳು ಕ್ರಮ ಕೈಗೊಳ್ಳಲು ಮುಂದಾಗಿವೆ. ಜನವರಿಯಲ್ಲಿ ಸಿಬಿಐ ಮಲ್ಯಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು.

Loading...
loading...
error: Content is protected !!