ಸಮುದ್ರದಲ್ಲಿ ಮುಳುಗಿರುವ ನಾಜಿಗಳ ಚಿನ್ನ ತೆಗೆಯಲು ಪ್ರಯತ್ನ – News Mirchi

ಸಮುದ್ರದಲ್ಲಿ ಮುಳುಗಿರುವ ನಾಜಿಗಳ ಚಿನ್ನ ತೆಗೆಯಲು ಪ್ರಯತ್ನ

ಹಲವು ವರ್ಷಗಳ ಹಿಂದೆ ಸಮುದ್ರದಲ್ಲಿ ಮುಳುಗಿಹೋದ ನಾಜಿಗಳ ಹಡಗನ್ನು ಹೊರಗೆ ತೆಗೆಯಲು ಟ್ರೆಜರ್ ಹಂಟರ್ಸ್(ನಿಧಿ ಹುಡುಕುವವರು) ಚಿಂತನೆ ನಡೆಸಿದ್ದಾರೆ. ಇದಕ್ಕಾಗಿ ಐಸ್ ಲ್ಯಾಂಡ್ ಸರ್ಕಾರಕ್ಕೆ ಮನವಿಯೂ ಮಾಡಿದ್ದಾರೆ. ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ದಕ್ಷಿಣ ಅಮೆರಿಕದಿಂದ ಜರ್ಮನಿಗೆ ಸಾಗಿಸುತ್ತಿದ್ದ ಸುಮಾರು 400 ಟನ್ ಚಿನ್ನ ಮುಳುಗಿಹೋದ ಹಡಗಿನಲ್ಲಿದೆ ಎಂಬುದು ನಿಧಿ ಹುಡುಕುವವರ ನಂಬಿಕೆ. ಹಡಗಿನಲ್ಲಿರುವ ಚಿನ್ನದ ಮೌಲ್ಯ ಸುಮಾರು 100 ಮಿಲಿಯನ್ ಪೌಂಡ್ ಎಂದು ಅಂದಾಜಿಸಲಾಗಿದೆ.

ಎರಡನೇ ವಿಶ್ವಯುದ್ಧ ನಡೆಯುತ್ತಿದ್ದ ಸಂದರ್ಭ. ದಕ್ಷಿಣ ಅಮೆರಿಕದಿಂದ ಜರ್ಮನಿಗೆ ಹಡಗೊಂದು ಹೊರಟಿತ್ತು. ಆಗ ಐಸ್ ಲ್ಯಾಂಡ್ ಸಮುದ್ರ ವ್ಯಾಪ್ತಿಯಲ್ಲಿ ಹಡಗು ಮುಳುಗಿಹೋಗಿತ್ತು. ಹಡಗಿನೊಂದಿಗೆ 400 ಟನ್ ನಷ್ಟು ಚಿನ್ನವೂ ಮುಳುಗಿತ್ತು.

ಸುಮಾರು ನಾಲ್ಕು ಟನ್ ಚಿನ್ನ ಮುಳಗಿದ್ದ ಹಡಗಿನಲ್ಲಿದೆ ಎನ್ನಲಾಗುತ್ತಿದೆ. ಹಡಗಿನಲ್ಲಿರುವ ದೊಡ್ಡ ಬಾಕ್ಸ್ ನಲ್ಲಿ ಆ ಚಿನ್ನವಿದೆ, ಅದನ್ನು ಹೊರಗೆ ತೆಗೆಯಲು ಬ್ರಿಟನ್ ನ ಕಂಪನಿಯೊಂದು ಪ್ರಯತ್ನಿಸುತ್ತಿದೆ. ಈ ಹಿಂದೆ ಐಸ್ ಲ್ಯಾಂಡ್ ಜಲಪ್ರದೇಶದಲ್ಲಿ ಪ್ರವೇಶಿಸಿ ಸಂಶೋಧನೆ ನಡೆಸಲು ಪ್ರಯತ್ನ ನಡೆದಿತ್ತಾದರೂ, ಆ ದೇಶದ ಸರ್ಕಾರ ಅನುಮತಿ ನೀಡಿರಲಿಲ್ಲ. ಹೀಗಾಗಿ ಐಸ್ ಲ್ಯಾಂಡ್ ಸರ್ಕಾರದಿಂದ ಹಸಿರು ನಿಶಾನೆಗಾಗಿ ಬ್ರಿಟನ್ ಕಂಪನಿಯು ಕಾಯುತ್ತಿದೆ.

Loading...