ಭಾರತೀಯ ಪಡೆಗಳ ಪ್ರಬಲ ಪ್ರತೀಕಾರದ ದಾಳಿ, ಮೂರು ಪಾಕ್ ಪೋಸ್ಟ್ ಗಳು ಧ್ವಂಸ |News Mirchi

ಭಾರತೀಯ ಪಡೆಗಳ ಪ್ರಬಲ ಪ್ರತೀಕಾರದ ದಾಳಿ, ಮೂರು ಪಾಕ್ ಪೋಸ್ಟ್ ಗಳು ಧ್ವಂಸ

ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಕುತಂತ್ರಗಳಿಗೆ ಭಾರತ ತಕ್ಕ ಉತ್ತರ ನೀಡುತ್ತಿದೆ. ಗಡಿಯಲ್ಲಿ ಕರ್ತವ್ಯನಿರತರಾಗಿದ್ದ ಬಿಎಸ್ಎಫ್ ಯೋಧರೊಬ್ಬರ ಮೇಲೆ ಪಾಕ್ ಸೈನಿಕರು ಗುಂಡಿನ ದಾಳಿ ನಡೆಸಿ ಹತ್ಯೆ ನಡೆಸಿದ ನಂತರ ರಾತ್ರಿಯೇ ಭಾರತ ಪಡೆಗಳು ಪ್ರತೀಕಾರದ ದಾಳಿಗೆ ಮುಂದಾಗಿವೆ. ಬುಧವಾರ ರಾತ್ರಿ ಸಾಂಬಾ ವಲಯದ ಸಮೀಪ ಪಾಕ್ ವಿರುದ್ಧ ಪ್ರತೀಕಾರದ ದಾಳಿ ನಡೆಸಿದ ಭಾರತ, ಮೂರು ಪಾಕಿಸ್ತಾನದ ಔಟ್ ಪೋಸ್ಟ್ ಗಳನ್ನು ಧ್ವಂಸಗೊಳಿಸಿದೆ.

ಈ ಘಟನೆಯಲ್ಲಿ 8-10 ಪಾಕ್ ರೇಂಜರ್ ಗಳು ಹತರಾಗಿರುವುದಾಗಿ ಬಲ್ಲ ಮೂಲಗಳು ಹೇಳಿವೆ. ಭಾರತದ ದಾಳಿಯಿಂದ ಪಾಕ್ ಗೆ ಬೃಹತ್ ಪ್ರಮಾಣದಲ್ಲಿ ಆಸ್ತಿ ನಷ್ಟ, ಪ್ರಾಣನಷ್ಟವಾಗಿರುವುದಾಗಿ ಬಿಎಸ್ಎಫ್ ಐಜಿ ರಾಮ್ ಅವತಾರ್ ಹೇಳಿದ್ದಾರೆ. ಅತ್ತ ಜಮ್ಮೂ ಕಾಶ್ಮೀರದಲ್ಲಿನ ನಿಯಂತ್ರಣ ರೇಖೆ ಬಳಿ ಒಳನುಸುಳಲು ಉಗ್ರರು ಮಾಡಿದ ಯತ್ನವನ್ನು ಬಿಎಸ್ಎಫ್ ವಿಫಲಗೊಳಿಸಿದೆ. ಒಬ್ಬ ಉಗ್ರನನ್ನು ಕೊಲ್ಲಲಾಗಿದ್ದು, ಉಳಿದವರು ಪರಾರಿಯಾದರೆಂದು ಸೇನೆಯ ಅಧಿಕಾರಿಗಳು ಹೇಳಿದ್ದಾರೆ. ಮತ್ತೊಂದು ಕಡೆ ಪಾಲ್ ನೊಂದಿಗೆ 200 ಕಿ.ಮೀ ದೂರದ ಗಡಿಯುದ್ದಕ್ಕೂ ಬಿಎಸ್ಎಫ್ ‘ಆಪರೇಷನ್ ಅಲರ್ಟ್’ ಆರಂಭಿಸಿದೆ.

ತನ್ನ ಸಾಕು ನಾಯಿ ಕೊಂದರೆಂದು ಮಕ್ಕಳ ವಿರುದ್ಧ ದೂರು ನೀಡಿದ ತಂದೆ

ಬುಧವಾರ ರಾತ್ರಿ ಆರ್.ಪಿ. ಹಜಾರಾ ಎಂಬ ಬಿಎಸ್ಎಫ್ ಪೇದೆ ಸಾಂಬಾ ಸೆಕ್ಟಾರ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಪಾಕ್ ನಿಂದ ಅಪ್ರಚೋದಿತ ದಾಳಿ ನಡೆದಿತ್ತು. ಭಾರತೀಯ ಪಡೆಗಳು ಎಚ್ಚೆತ್ತು ಕಾರ್ಯಪ್ರವೃತ್ತರಾಗುವ ವೇಳೆಗೆ ಹಜಾರ ಗುಂಡಿನ ದಾಳಿಯಿಂದಾಗಿ ಸಾವನ್ನಪ್ಪಿದ್ದರು. ಕೂಡಲೇ ಬಿಎಸ್ಎಫ್ ಪಾಕ್ ವಿರುದ್ಧ ಪ್ರತಿದಾಳಿಗೆ ಇಳಿದಿತ್ತು. ಸಾಂಬಾ ಸೆಕ್ಟಾರ್ ನಲ್ಲಿ ಪಾಕ್ ಮೊರ್ಟಾರ್ ಗಳಿರುವ ಪ್ರದೇಶವನ್ನು ಗುರುತಿಸಿದ ಭಾರತದ ಪಡೆಗಳು ಪ್ರತಿದಾಳಿ ನಡೆಸಿದವು. ಈ ಮಟ್ಟದ ಪ್ರತಿದಾಳಿಯನ್ನು ನಿರೀಕ್ಷಿಸದ ಪಾಕಿಸ್ತಾನಕ್ಕೆ ತೀವ್ರ ಹಾನಿಯಾಗಿದೆ. ಸೋಲಾರ್ ಪ್ಯಾನೆಲ್, ಶಸ್ತ್ರಾಸ್ತ್ರಗಳು ಧ್ವಂಸವಾಗಿದ್ದು, ಹಲವರು ಸಾವನ್ನಪಿದ್ದಾರೆ ಎಂದು ಭಾರತೀಯ ಸೇನೆ ಹೇಳಿದೆ.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!