ಪಾಕ್ ನಿಂದ ಭಾರತಕ್ಕೆ ಕೊರೆದ ಸುರಂಗ ಮಾರ್ಗ ಪತ್ತೆ – News Mirchi

ಪಾಕ್ ನಿಂದ ಭಾರತಕ್ಕೆ ಕೊರೆದ ಸುರಂಗ ಮಾರ್ಗ ಪತ್ತೆ

ಜಮ್ಮೂ: ಪಾಕಿಸ್ತಾನದ ಭೂಪ್ರದೇಶದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಕೊರೆದ 14 ಮೀಟರ್ ಸುರಂಗ ಪತ್ತೆಯಾಗಿದೆ. ಗಡಿ ಭದ್ರತಾ ಪಡೆ (ಬಿಎಸ್ಎಫ್) ಶನಿವಾರ ಶನಿವಾರ ಆರ್ನಿಯಾ ಸೆಕ್ಟಾರ್ ಬಳಿಯ ಶೂನ್ಯರೇಖೆಯಲ್ಲಿ ಇದನ್ನು ಗುರುತಿಸಿದೆ.

ಈ ಸುರಂಗ ಪತ್ತೆ ಮೂಲಕ ಭಾರತದೊಳಕ್ಕೆ ಉಳನುಸುಳುವ ಉಗ್ರರ ಪ್ರಯತ್ನಗಳನ್ನು ವಿಫಲಗೊಳಿಸಿದಂತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದು ಭಾರತಕ್ಕೆ ಬೆದರಿಕೆ ಮತ್ತು ಆಕ್ರಮಣಶೀಲತೆಗೆ ಕಾರಣವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶೂನ್ಯರೇಖೆಯ ಬಳಿ ಕೆಲವು ಶಸ್ತ್ರಸಜ್ಜಿತ ಉಗ್ರರು ಬಿಎಸ್ಎಫ್ ಯೋಧರನ್ನು ನೋಡಿ ಪರಾರಿಯಾದಾಗ ಅನುಮಾನಗೊಂಡ ಬಿಎಸ್ಎಫ ಪಡೆ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಈ ಸುರಂಗ ಮಾರ್ಗ ಪತ್ತೆಯಾಗಿದೆ.

ಸ್ಥಳದಲ್ಲಿ ಪಾಕಿಸ್ಥಾನದಲ್ಲಿ ತಯಾರಾದ ಆಹಾರ ಪದಾರ್ಥಗಳು ಪತ್ತೆಯಾಗಿದ್ದು, ಉಗ್ರರು ಆದಷ್ಟು ಬೇಗ ಸುರಂಗ ನಿರ್ಮಾಣವನ್ನು ಪೂರ್ಣಗೊಳಿಸಿ ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಉದ್ದೇಶಿಸಿದ್ದರು ಎನ್ನಲಾಗುತ್ತಿದೆ.

ಈ ಸುರಂಗ ಮಾರ್ಗವು 3 ಅಡಿ ಎತ್ತರ, 2 ಅಡಿ ಅಗಲವಿದೆ. ಸ್ಥಳದಲ್ಲಿ ಪಾಕ್ ನಲ್ಲಿ ತಯಾರಾದ ಆಹಾರ ಪದಾರ್ಥಗಳು, ಮ್ಯಾಪ್, ಎರಡು ಮ್ಯಾಗಜಿನ್, 60 ಸುತ್ತಿನ ಮದ್ದುಗುಂಡು, ಹ್ಯಾಂಡ್ ಗ್ರೆನೇಡ್, ಪಾಕಿಸ್ತಾನದ ಗುರುತಿರುವ ಮತ್ತಷ್ಟು ವಸ್ತುಗಳು ಸಿಕ್ಕಿವೆ ಎಂದು ಬಿಎಸ್ಎಫ್ ಐಜಿ ಅವತಾರ್ ಹೇಳಿದ್ದಾರೆ.

ಪಾಕ್ ರೇಂಜರ್ಸ್ ಸಹಕಾರ

ಪತ್ತೆಯಾದ ಸುರಂಗ ಮಾರ್ಗವು ಪಾಕಿಸ್ತಾನದ ಸಂಚು ಎಂದು ಹೇಳಿರುವ ಅವತಾರ್ ಅವರು, ಸೂಕ್ತ ಸಮಯದಲ್ಲಿ ಈ ಸಂಚನ್ನು ವಿಫಲಗೊಳಿಸಿ ಭಾರತದಲ್ಲಿ ನಡೆಯಬಹುದಾಗಿದ್ದ ಭಯೋತ್ಪಾದಕ ದಾಳಿಗಳನ್ನು ವಿಫಲಗೊಳಿಸಿದಂತಾಗಿದೆ ಎಂದು ಹೇಳಿದ್ದಾರೆ. ಅಗಲೇ ಸರಿಸಿದ ಮಣ್ಣು, ಅಗೆದ ದೂರವನ್ನು ಗಮನಿಸಿದರೆ ಸುರಂಗ ಮಾರ್ಗ ನಿರ್ಮಾಣ ಮೂರು ದಿನಗಳ ಹಿಂದಷ್ಟೇ ಆರಂಭವಾಗಿರಬಹುದು ಎಂದು ಹೇಳಿದ್ದಾರೆ.

[ಇದನ್ನೂ ಓದಿ: ಸುಷ್ಮಾ ಮನವಿಗೆ ಸ್ಪಂದಿಸಿದ ಕುವೈತ್ ದೊರೆ, 15 ಭಾರತೀಯರ ಮರಣದಂಡನೆ ರದ್ದು]

ಈ ಸುರಂಗದ ಆರಂಭ ಪಾಕಿಸ್ತಾನದಲ್ಲಿದ್ದು, ಬೇಲಿ, ಶೂನ್ಯರೇಖೆ ನಡುವೆ ಕೊನೆ ಇದೆ ಎಂದು ಅಧಿಕಾರಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ಈ ಸುರಂಗ ನಿರ್ಮಾಣದ ಕುರಿತು ಪಾಕ್ ರೇಂಜರ್ಸ್ ಗೆ ತಿಳಿದಿರುತ್ತದೆ ಎಂದು ಹೇಳಿದ್ದಾರೆ. ಸುರಂಗ ಕೊರೆಯಲು ಉಪಯೋಗಿಸಿದ ವಸ್ತುಗಳು, ಆಯ್ಕೆ ಮಾಡಿಕೊಂಡ ಪ್ರದೇಶ ನೋಡಿದರೆ, ಅನುಭವಿ ವ್ಯಕ್ತಿಗಳನ್ನು ಸುರಂಗ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ ಎಂಬುದು ತಿಳಿದುಬರುತ್ತಿದೆ. ಯಾರೇ ಆಗಲಿ ಸ್ವಲ್ಪ ಬಾಗಿ ಸುಲಭವಾಗಿ ಸುರಂಗ ಮಾರ್ಗವಾಗಿ ನಡೆದುಬಿಡಬಹುದು ಎಂದು ಅಧಿಕಾರಿ ಹೇಳಿದ್ದಾರೆ.

Get Latest updates on WhatsApp. Send ‘Add Me’ to 8550851559

Loading...