ಬಿಎಸ್ಎನ್ಎಲ್ ನಿಂದ ಪ್ರತಿದಿನ 2ಜಿಬಿ ಡಾಟಾ, ಉಚಿತ ಕರೆ ಆಫರ್್

ರಿಲಯನ್ಸ್ ಜಿಯೋಗೆ ಪ್ರಬಲ ಸ್ಪರ್ಧೆ ನೀಡಲು ಬಿಎಸ್ಎನ್ಎಲ್ ಸಿದ್ಧವಾಗಿದೆ. ರೂ.339 ಕ್ಕೆ ತನ್ನ ನೆಟ್ ವರ್ಕ್ ವ್ಯಾಪ್ತಿಯಲ್ಲಿ ಅನ್‌ಲಿಮಿಟೆಡ್ ಕಾಲಿಂಗ್‌ ಕೊಡುಗೆ ನೀಡಲಿದೆ. ಇದರ ಜೊತೆಗೆ ಪ್ರತಿದಿನ 2ಜಿಬಿ 3ಜಿ ಡಾಟಾ ಉಚಿತವಾಗಿ ಲಭಿಸಲಿದೆ. ಈ ಪ್ಲಾನ್ ಅವಧಿ 28 ದಿನಗಳು. ಹಾಗೆಯೇ, ಪ್ರತಿದಿನ 25 ನಿಮಿಷಗಳು ಇತರೆ ನೆಟ್ವರ್ಕ್ ಗಳಿಗೆ ಉಚಿತ ಕರೆ ಮಾಡಬಹುದು. ನಂತರದ ಕರೆಗಳಿಗೆ ಪ್ರತಿ ನಿಮಿಷಕ್ಕೆ 25 ಪೈಸೆ ಕಡಿತಗೊಳ್ಳಲಿದೆ.

ರಿಲಯನ್ಸ್ ಜಿಯೋನಲ್ಲಿ ಏಪ್ರಿಲ್ ನಿಂದ ಪ್ರತಿ ತಿಂಗಳು ರೂ.303 ರೀಚಾರ್ಜ್ ಮಾಡಿಕೊಳ್ಳುವ ಮೂಲಕ ಗ್ರಾಹಕರು ಅನಿಯಮಿತ ಕರೆ ಮಾಡಬಹುದು, ಡಾಟಾ ಕೂಡಾ ಉಚಿತ ಎಂದು ಜಿಯೋ ಪ್ರಕಟಿಸಿದೆ. ಇದಕ್ಕಾಗಿ ಜಿಯೋ ಗ್ರಾಹಕರು ಮಾರ್ಚ್ ಅಂತ್ಯದೊಳಗೆ ರೂ.99 ರಿಚಾರ್ಜ್ ಮಾಡಿಕೊಂಡು ಜಿಯೋ ಪ್ರೈಮ್ ಮೆಂಬರ್ಷಿಪ್ ಪಡೆಯಬೇಕಿರುತ್ತದೆ.

Loading...

Leave a Reply

Your email address will not be published.

error: Content is protected !!