rahul-gandhi-eating-chicken

ಚಿಕನ್ ತಿಂದು ನರಸಿಂಹಸ್ವಾಮಿ ದರ್ಶನ ಮಾಡಿದ ರಾಹುಲ್: ಯಡಿಯೂರಪ್ಪ

ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣಾ ಪ್ರಚಾರದ ವೇಳೆ ನಿರಂತರವಾಗಿ ದೇವಾಲಯಗಳ ದರ್ಶನ ಮಾಡುತ್ತಿದ್ದಾರೆ. ಗುಜರಾತ್ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರ ‘ಟೆಂಪಲ್ ರನ್’ ಚರ್ಚೆಗೆ ಕಾರಣವಾಗಿತ್ತು. ಇದೀಗ ಕರ್ನಾಟಕದಲ್ಲಿಯೂ ಅದೇ ಹಾದಿಯಲ್ಲಿ ಸಾಗಿದ್ದಾರೆ.

ವೇದಗಳೇ ರಾಜ ಶಾಸನಗಳು : ಶ್ರೀ ಗುರುದತ್ತ ಚಕ್ರವರ್ತಿ ಸ್ವಾಮೀಜಿ

ರಾಹುಲ್ ಗಾಂಧಿಯವರ ಹಿಂದೂ ದೇವಸ್ಥಾನಗಳ ಭೇಟಿಯ ಹಿನ್ನೆಲೆಯಲ್ಲಿ ಅವರನ್ನು ‘ಚುನಾವಣಾ ಹಿಂದೂ’ ಎಂದು ಬಿಜೆಪಿ ಬಣ್ಣಿಸುತ್ತಿದೆ. ಇದೀಗ ಚಿಕನ್ ತಿಂದು ರಾಹುಲ್ ಗಾಂಧಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.

ನಾವು ಯಾರ ಗುಲಾಮರಲ್ಲ, ಯಾರ ಹಂಗೂ ಬೇಕಿಲ್ಲ : ಜೆ.ಕೆ.ಕೃಷ್ಣಾರೆಡ್ಡಿ

ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೀನಿನ ಊಟ ತಿಂದು ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆದಿದ್ದರು. ನಂತರ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಇದೀಗ ರಾಹುಲ್ ಗಾಂಧಿ ಚಿಕನ್ ತಿಂದು ನರಸಿಂಹಸ್ವಾಮಿ ದರ್ಶನ ಮಾಡಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ. ಹಿಂದೂಗಳ ಭಾವನೆಗಳಿಗೆ ಕಾಂಗ್ರೆಸ್ ಪಕ್ಷವೇಕೆ ಘಾಸಿ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಸಮಾಜವಾದಿಗಿಂತಲೂ ಮಜಾವಾದ ಹೆಚ್ಚಾಗಿ ಕಾಣುತ್ತಿದೆ ಎಂದು ಅವರು ಆರೋಪಿಸಿದರು.

Get Latest updates on WhatsApp. Send ‘Subscribe’ to 8550851559