ಇಲ್ಲಿ ಐಫೋನ್ ಗಳ ಮೇಲೆ 20,000 ರಿಯಾಯಿತಿ!

ದೆಹಲಿಯಲ್ಲಿ ವಾಸುಸುತ್ತಿರುವವರಿಗೆ ಇದು ಶುಭ ಸುದ್ದಿ. ದೆಹಲಿಯಲ್ಲಿನ ಐವರ್ಲ್ಡ್ ಮಳಿಗೆಗಳಲ್ಲಿ ಐಫೋನ್-7 ಗಳ ಮೇಲೆ ಅತ್ಯಾಕರ್ಷಕ ಡಿಸ್ಕೌಂಟ್ ಸಿಗುತ್ತಿದೆ. 32 ಜಿಬಿ ಇಂಟರ್ನಲ್ ಸ್ಟೋರೇಜ್ ಸ್ಮಾರ್ಟ್ ಫೋನ್ ಗಳ ಮೇಲೆ ಈ ಮಳಿಗೆಗಳಲ್ಲಿ ರೂ.20,010 ರಿಯಾಯಿತಿ ದೊರೆಯುತ್ತಿದೆ. [ ಕೈಗೆಟುಕುವ ಬೆಲೆಯಲ್ಲಿ “ರೆಡ್ಮಿ 4ಎ” ಸ್ಮಾರ್ಟ್ ಫೋನ್ ]

ದೆಹಲಿಯಲ್ಲಿನ ಕೆಲ ಐವರ್ಲ್ಡ್ ಮಳಿಗೆಗಳಲ್ಲಿ ಐಫೋನ್ 7 ಸ್ಮಾರ್ಟ್ ಫೋನ್ ಗಳನ್ನು ಕೇವಲ 39,990 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ನವದೆಹಲಿಯ ಖಾನ್ ಮಾರ್ಕೆಟ್, ಗುರುಗ್ರಾಮ್ ನ ಏರೋಸಿಟಿ, ನೋಯ್ಡಾದ ಲಾಜಿಕ್ಸ್ ಸಿಟಿ ಹೀಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿರುವ ಕೆಲ ಆಯ್ದ ಮಳಿಗೆಗಳಿರುವ ಪ್ರದೇಶಗಳು. ಐಫೋನ್ 7 ರೆಡ್ ಮತ್ತು ಐಫೋನ್ 7 ಪ್ಲಸ್ ಸ್ಮಾರ್ಟ್ ಫೋನ್ ಗಳೂ ಇಲ್ಲಿನ ಐವರ್ಲ್ಡ್ ಮಳಿಗೆಗಳಲ್ಲಿ ಲಭ್ಯ.

ಇಲ್ಲಿ ರೂ.80,900 ಮೌಲ್ಯದ ಮ್ಯಾಕ್ ಬುಕ್ ಕೇವಲ ರೂ.49,990 ಕ್ಕೆ ನೀಡುತ್ತಿದ್ದು, ಇವುಗಳ ಮೇಲೆ ರೂ. 30,910 ರಿಯಾಯಿತಿ ಪಡೆಯಬಹುದಾಗಿದೆ.

ನೀವು ಐಫೋನ್ ಖರೀದಿಸಲು ಬಯಸುತ್ತಿದ್ದೀರಾದರೆ ಇಲ್ಲಿನ ಐವರ್ಲ್ಡ್ ಮಳಿಗೆಗಳಿಗೊಮ್ಮೆ ಭೇಟಿ ನೀಡಿ.

Loading...
error: Content is protected !!