ಪ್ರದ್ಯುಮ್ನ ಹತ್ಯೆ ಪ್ರಕರಣ: ಅಪರಾಧಿಯನ್ನು ರಕ್ಷಿಸಲು ನನ್ನ ಬಲಿಪಶು ಮಾಡಿದ ಪೊಲೀಸರು

ವಿದ್ಯಾರ್ಥಿ ಪ್ರದ್ಯುಮ್ನ ಹತ್ಯೆ ಪ್ರಕರಣದಲ್ಲಿ ತನ್ನನ್ನು ಬಲಿಪಶು ಮಾಡಲಾಗಿದೆ ಎಂದು ರ್ಯಾನ್ ಇಂಟರ್ನ್ಯಾಷನ್ ಸ್ಕೂಲ್ ಬಸ್ ಕಂಡಕ್ಟರ್ ಆರೋಪಿಸಿದ್ದಾರೆ. ಹತ್ಯೆ ಮಾಡಿದ್ದಾಗಿ ಅಂಗೀಕರಿಸುವಂತೆ ನನ್ನನ್ನು ಹರಿಯಾಣ ಪೊಲೀಸರು ಹಿಂಸಿಸಿದರು ಎಂದು ಶಾಲೆಯ ಕಂಡಕ್ಟರ್ ಅಶೋಕ್ ಕುಮಾರ್ ನೋವು ತೋಡಿಕೊಂಡಿದ್ದಾನೆ. ಹರಿಯಾಣ ಪೊಲೀಸರು, ಶಾಲೆಯ ವಿರುದ್ಧ ಈ ಸಂಬಂಧ ದೂರು ದಾಖಲಿಸಿದ್ದಾರೆ. ಈ ಕುರಿತು ಅಶೋಕ್ ಪರ ವಕೀಲ ಮಾತನಾಡುತ್ತಾ, ನಿಜವಾದ ಅಪರಾಧಿಯನ್ನು ರಕ್ಷಿಸಲು ಪೊಲೀಸರು ತನ್ನ ಕಕ್ಷಿದಾರನನ್ನು ಬಲಿಪಶು ಮಾಡಿದರು ಎಂದು ಆರೋಪಿಸಿದರು.

[ಇದನ್ನೂ ಓದಿ: ಪರೀಕ್ಷೆ ಮುಂದೂಡಲೆಂದೇ ವಿದ್ಯಾರ್ಥಿಯ ಹತ್ಯೆ ಮಾಡಲಾಗಿತ್ತು]

ನನ್ನ ಮಗ ಅಶೋಕ್ ನನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದಾಗಿ ನನಗೆ ಅರ್ಥವಾಯಿತು. ಹಾಗಾಗಿಯೇ ನಾವು ಗುರುಗ್ರಾಮ್ ಪೊಲೀಸ್ ಎಸ್.ಐ.ಟಿ ತಂಡ, ಪೊಲೀಸರು ಮೇಲೆ ದೂರು ದಾಖಲಿಸುತ್ತಿದ್ದೇವೆ. ಹತ್ಯೆ ಮಾಡಿರುವುದಾಗಿ ಒಪ್ಪಿಕೊಳ್ಳುವಂತೆ ನನ್ನ ಮಗನನ್ನು ಕ್ರೂರವಾಗಿ ಪೊಲೀಸರು ಹಿಂಸಿಸಿದ್ದಾರೆ ಎಂದು ಅಶೋಕ್ ತಂತೆ ಆರೋಪಿಸಿದ್ದಾರೆ. ನನ್ನ ಮಗನಿಗೆ ನ್ಯಾಯ ಸಿಗಲಿ, ನಿರ್ಲಕ್ಷ್ಯವಾಗಿ ವರ್ತಿಸಿದ ಪೊಲೀಸರು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಅವರು ಒತ್ತಾಯಿಸಿದರು.

ಗುರುಗ್ರಾಮ್ ನ ರ್ಯಾನ್ ಇಂಟರ್ ನ್ಯಾಷನಲ್ ಶಾಲೆಯ ಏಳು ವರ್ಷ ಪ್ರದ್ಯುಮ್ನ ನನ್ನು ಬಸ್ ಕಂಡಕ್ಟರ್ ಅಶೋಕ್ ಕುಮಾರ್ ಲೈಂಗಿಕವಾಗಿ ಕಿರುಕುಳ ನೀಡಿ ಕ್ರೂರವಾಗಿ ಹತ್ಯೆ ಮಾಡಿದ್ದಾಗಿ ಈ ಹಿಂದೆ ಪೊಲೀಸರು ಹೇಳಿದ್ದರು. ಆದರೆ ಇದೀಗ ಈ ಪ್ರಕರಣ ಹೊಸ ತಿರುವು ಪಡೆದಿದ್ದು, ಪರೀಕ್ಷೆಯನ್ನು ಮುಂದೂಡುವಂತೆ ಮಾಡಲೆಂದೇ ಅದೇ ಶಾಲೆಯ 11 ನೇ ತರಗತಿ ವಿದ್ಯಾರ್ಥಿಯೊಬ್ಬ ಹತ್ಯೆ ಮಾಡಿದ್ದಾಗಿ ಸಿಬಿಐ ಅಧಿಕಾರಿಗಳು ಹೇಳಿದ್ದಾರೆ. ಆತ ತನ್ನ ತಂದೆಯ ಎದುರು ಹತ್ಯೆ ಆರೋಪವನ್ನು ಒಪ್ಪಿಕೊಂಡಿರುವುದಾಗಿ ಸಿಬಿಐ ಹೇಳಿದೆ. ಸದ್ಯ ಹತ್ಯೆ ನಡೆಸಿದ ವಿದ್ಯಾರ್ಥಿಯನ್ನು ವಿಚಾರಣೆಗಾಗಿ ಸಿಬಿಐ ವಶಕ್ಕೆ ನೀಡಲಾಗಿದೆ.

Get Latest updates on WhatsApp. Send ‘Add Me’ to 8550851559