ಹೌದು ಕೇಜ್ರಿವಾಲ್ ಗೆ ರೂ. 2 ಕೋಟಿ ನೀಡಿದ್ದೇನೆ

ಆಮ್ ಆದ್ಮಿ ಪಕ್ಷ (ಆಪ್)ದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಗೆ 2 ಕೋಟಿ ಲಂಚ ನೀಡಲಾಗಿದೆ ಎಂಬ ಆರೋಪಗಳ ಕುರಿತಂತೆ ದೆಹಲಿಯ ಉದ್ಯಮಿ ಶರ್ಮ ಪ್ರತಿಕ್ರಿಯಿಸಿದ್ದಾರೆ. ತಾವೂ ಕೇಜ್ರಿವಾಲ್ ಅವರಿಗೆ ಎರಡು ಕೋಟಿ ನೀಡಿದ್ದು ನಿಜ, ಆದರೆ ಅದನ್ನು ಪಕ್ಷಕ್ಕೆ ದೇಣಿಗೆ ನೀಡಿರುವುದಾಗಿ ಹೇಳಿದ್ದಾರೆ. 2014ರ ಮಾರ್ಚ್ 31ರಂದು ಡಿಡಿ ರೂಪದಲ್ಲಿ ಹಣ ನೀಡಿರುವುದಾಗಿ ಆಪ್ ಉಚ್ಛಾಟಿತ ನಾಯಕ ಕಪಿಲ್ ಮಿಶ್ರಾ ಸೇರಿದಂತೆ ಹಲವು ನಾಯಕರಿಗೆ ಹೇಳಿದ್ದೆವು ಎಂದು ಅವರು ಹೇಳಿದ್ದಾರೆ. ಆಪ್ ಉಚ್ಛಾಟಿತ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ಉದ್ಯಮಿ ಹೇಳಿದ್ದಾರೆ.

ದೆಹಲಿ ಮುಖ್ಯಮಂತ್ರಿ, ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಉದ್ಯಮಿಯೊಬ್ಬರ ಬಳಿ ರೂ.2 ಕೋಟಿ ಲಂಚ ಪಡೆದಿದ್ದಾರೆ, ಇದಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಸಾಕ್ಷಿಗಳಿವೆ ಎಂದು ಕಪಿಲ್ ಮಿಶ್ರಾ ಆರೋಪ ಮಾಡಿದ್ದರು. ಬೋಗಸ್ ಕಂಪನಿಗಳ ಹೆಸರಿನಲ್ಲಿ ಲಂಚ ಪಡೆದಿದ್ದಾರೆ ಎಂದು ಕೇಜ್ರಿವಾಲ್ ವಿರುದ್ಧ ಕಪಿಲ್ ಮಿಶ್ರಾ ಮಾಡುತ್ತಿರುವ ಆರೋಪಗಳನ್ನು ಕೇಳಿ ಕೇಳಿ ಬೇಸರವಾಗಿ, ಮತ್ತೊಮ್ಮೆ ದೇಣಿಗೆ ನೀಡಿದ ವಿವರಗಳನ್ನು ಹೇಳಬೇಕಾಗಿ ಬಂತು ಎಂದು ಉದ್ಯಮಿ ಹೇಳಿದ್ದಾರೆ.

Related News

Loading...
error: Content is protected !!