Iphone

15 ಸಾವಿರ ರೂಪಾಯಿಗೇ ಐಫೋನ್, ಐಪ್ಯಾಡ್… ಹೇಗೆ ಗೊತ್ತಾ?

ಇನ್ನು ಕೆಲವೇ ದಿನಗಳಲ್ಲಿ ಪ್ರೇಮಿಗಳ ದಿನಾಚರಣೆ ಬರುತ್ತಿದೆ. ಇದರ ಪ್ರಯುಕ್ತ ಆಪಲ್ ಐಫೋನ್ ಮತ್ತು ಐಪ್ಯಾಡ್ ಗಳ ಮೇಲೆ ಹೆಚ್.ಡಿ.ಎಫ್.ಸಿ ಬ್ಯಾಂಕ್ ಬೃಹತ್ ರಿಯಾಯಿತಿ ಪ್ರಕಟಿಸಿದೆ.

ಹೆಚ್.ಡಿ.ಎಫ್.ಸಿ ಬ್ಯಾಂಕ್ ಕಾರ್ಡ್ ಹೊಂದಿರುವವರು ಅಧಿಕೃತ ಡೀಲರ್ ಗಳ ಬಳಿ ಆಪಲ್ ಡಿವೈಸ್ ಗಳನ್ನು ಖರೀದಿಸಿದರೆ, ಅವರಿಗೆ ರೂ.10 ಸಾವಿರದವರೆಗೆ ಕ್ಯಾಷ್ ಬ್ಯಾಕ್ ನೀಡುತ್ತಿದೆ. ಈ ಕೊಡುಗೆ ಕೇವಲ ಇಎಂಐ ಮೂಲಕ ಖರೀದಿಸುವವರಿಗೆ ಮಾತ್ರ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

ipnone-se

ಐಫೋನ್ ಎಸ್.ಇ, ಐಫೋನ್ 6 ಮೇಲೆ 7 ಸಾವಿರ ರೂಪಾಯಿ ಕ್ಯಾಷ್ ಬ್ಯಾಕ್ ನೀಡುತ್ತಿದೆ, ಇವುಗಳನ್ನು ಕೇವಲ ಹೆಚ್.ಡಿ.ಎಫ್.ಸಿ ಡೆಬಿಟ್, ಕ್ರೆಡಿಟ್ ಕಾರ್ಡ್ ಮೂಲಕವೇ ಖರೀದಿಸಬೇಕಿರುತ್ತದೆ. ಅದೂ ಇಎಂಐ ರೂಪದಲ್ಲೇ ಖರೀದಿಸಬೇಕು. ಈಗ ಐಫೋನ್ ಎಸ್.ಇ(32ಜಿಬಿ) ಬೆಲೆ ರೂ.22 ಸಾವಿರವಿದ್ದು, 7 ಸಾವಿರ ರೂಪಾಯಿ ಕ್ಯಾಷ್ ಬ್ಯಾಕ್ ನಂತರ ರೂ.15 ಸಾವಿರಕ್ಕೇ ಇದನ್ನು ಗ್ರಾಹಕರು ತಮ್ಮದಾಗಿಸಿಕೊಳ್ಳಬಹುದು. ಐಫೋನ್-6 ಗೂ ಇದೇ ಆಫರ್ ಅನ್ವಯವಾಗುತ್ತದೆ.

ipad

ಐಪ್ಯಾಡ್, ಐಪ್ಯಾಡ್ ಮಿನಿ-4, ಐಪ್ಯಾಡ್ ಪ್ರೊ ಇಎಂಐ ಖರೀದಿಗಳ ಮೇಲೆ ರೂ.10 ಸಾವಿರವರೆಗೂ ಕ್ಯಾಷ್ ಬ್ಯಾಕ್ ಆಫರ್ ಅನ್ನು ಹೆಚ್.ಡಿ.ಎಫ್.ಸಿ ಬ್ಯಾಂಕ್ ಘೋಷಿಸಿದೆ. ಹೀಗಾಗಿ 9.7 ಇಂಚಿನ ವೈಫೈ ಓನ್ಲಿ ಮಾದರಿಯ ಐಪ್ಯಾಡ್(32ಜಿಬಿ) ಅತಿ ಕಡಿಮೆ ಬೆಲೆಗೆ ಸಿಗುತ್ತದೆ. ಮಾರುಕಟ್ಟೆಯಲ್ಲಿ ರೂ.25 ಸಾವಿರ ರೂಪಾಯಿಗೆ ಸಿಗುತ್ತಿರುವ ಇದು ರೂ.10 ಸಾವಿರ ಕ್ಯಾಷ್ ಬ್ಯಾಕ್ ನಂತರ ರೂ.15 ಸಾವಿರಕ್ಕೆ ಲಭ್ಯವಾಗುತ್ತಿದೆ.

ಹಾಲಿಗಾಗಿ ಮಗು ಅತ್ತರೆ, ಕತ್ತು ಸೀಳಿ ಕೊಂದಳೇ ತಾಯಿ?

ಐಫೋನ್ ಮಳಿಗೆಗಳು, ಪ್ರಸಿದ್ಧ ಮೊಬೈಲ್ ಮಳಿಗೆಗಳಲ್ಲಿ ಹೆಚ್.ಡಿ.ಎಫ್.ಸಿ ಡೆಬಿಟ್, ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದವರಿಗೆ ಈ ರಿಯಾಯಿತಿ ಬೆಲೆಗಳು ಅನ್ವಯವಾಗುತ್ತವೆ. ಫೆಬ್ರವರಿ 14 ರವರೆಗೂ ಈ ಕೊಡುಗೆಯನ್ನು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಕಂಪನಿ ಹೇಳಿದೆ.

Download our Android App

Get Latest updates on WhatsApp. Send ‘Subscribe’ to 8550851559