ಉಪ ಚುನಾವಣೆಗಳ ಮತದಾನ ಆರಂಭ

ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿ, ಅರುಣಾಚಲ ಪ್ರದೇಶ, ಮಧ್ಯಪ್ರದೇಶ, ಅಸ್ಸಾಂಗಳಲ್ಲಿ ಉಪ ಚುನಾವಣೆಗಳ ಮತದಾನ ಬೆಳಗ್ಗೆ ಆರಂಭವಾಗಿದೆ. ಪಶ್ಚಿಮ ಬಂಗಾಳದಲ್ಲಿ ಎರಡು ಲೋಕಸಭಾ ಸ್ಥಾನಗಳು, ಒಂದು ವಿಧಾನಸಭಾ ಕ್ಷೇತ್ರದ ಮತದಾನ ನಡೆಯುತ್ತಿದೆ. ಕುಚ್ ಬೆಹಾರ್, ತಮ್ಲಕ್ ಲೋಕಸಭೆ ಕ್ಷೇತ್ರ, ಮಾಂತೇಶ್ವರ್ ವಿಧಾನಸಭೆ ಕ್ಷೇತ್ರದ ಮತದಾನ ಆರಂಭವಾಗಿದೆ. ಮತದಾರರು ಬೆಳಗ್ಗೆ ಏಳು ಗಂಟೆಗೂ ಮೊದಲೇ ಪೋಲಿಂಗ್ ಕೇಂದ್ರಗಳತ್ತ ಧಾವಿಸುತ್ತಿದ್ದಾರೆ.

ತಮಿಳುನಾಡಿನ ತಿರುಪ್ಪುರನ್ ಕುಂದ್ರಂ, ಅರಿವಕ್ಕುರಿಚ್ಚಿ, ತಂಜಾವೂರು ವಿಧಾನಸಭೆ ಕ್ಷೇತ್ರ, ಪುದುಚೇರಿಯ ಒಂದು ವಿಧಾನಸಭೆ ಕ್ಷೇತ್ರಕ್ಕೆ ಮತದಾನ ನಡೆಯುತ್ತಿದೆ. ಮತ ಎಣಿಕೆ ಈ ತಿಂಗಳ 22 ರಂದು ನಡೆಯಲಿದೆ.