ಹಳೆಯ ನೋಟು ಹೊಂದಿದ್ದರೆ ಇನ್ನು ಮುಂದೆ ಜೈಲು ಶಿಕ್ಷೆ |News Mirchi

ಹಳೆಯ ನೋಟು ಹೊಂದಿದ್ದರೆ ಇನ್ನು ಮುಂದೆ ಜೈಲು ಶಿಕ್ಷೆ

ಹಳೆಯ ನೋಟು ರದ್ದು ಕುರಿತು ಕೇಂದ್ರ ಸರ್ಕಾರ ಹೊಸ ತೀರ್ಮಾನ ಕೈಗೊಂಡಿದೆ. 2017 ಮಾರ್ಚ್ 31 ರ ನಂತರ ಹಳೆಯ ನೋಟುಗಳನ್ನು ಹೊಂದಿರುವವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸುವಂತೆ ಹೊಸ ಸಗ್ರೀವಾಜ್ಞೆಯನ್ನು ತಂದಿದೆ. ಈ ಸಂಬಂಧ ಸುಗ್ರೀವಾಜ್ಞೆಯನ್ನು ಕೇಂದ್ರ ಸರ್ಕಾರ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿತು. ಡಿಸೆಂಬರ್ 30 ರ ನಂತರ ಹಳೆಯ ನೋಟುಗಳ ವ್ಯವಹಾರ ನಡೆಸಿದರೆ ರೂ. 5 ಸಾವಿರದವರೆಗೂ ದಂಡ ವಿಧಿಸಲು ಅವಕಾಶವಾಗುವಂತೆ ಸುಗ್ರೀವಾಜ್ಞೆಯಲ್ಲಿದೆ. ಇದರಿಂದ ಹಳೆಯ ನೋಟು ಹೊಂದಿರುವವರಿಗೆ ಕಠಿಣ ಎಚ್ಚರಿಕೆಗಳನ್ನು ಸರ್ಕಾರ ನೀಡಿದಂತಾಗಿದೆ.

ಡಿಸೆಂಬರ್ 30 ರ ನಂತರವೂ ಹಳೆಯ ರೂ. 500, ರೂ. 1000 ನೋಟುಗಳನ್ನು ಬ್ಯಾಂಕುಗಳಲ್ಲಿ ಡಿಪಾಸಿಟ್ ಮಾಡದಂತೆ ಉಳಿಸಿಕೊಂಡಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಈ ಸುಗ್ರೀವಾಜ್ಞೆಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದೆ.

ಹಳೆಯ ನೋಟುಗಳನ್ನು ರದ್ದು ಮಾಡುತ್ತಿರುವುದಾಗಿ ಪ್ರಕಟಿಸಿದ್ದ ಮೋದಿ, ಅವುಗಳನ್ನು ಬ್ಯಾಂಕುಗಳಲ್ಲಿ ಡಿಪಾಸಿಟ್ ಮಾಡಲು ಡಿಸೆಂಬರ್ 30 ರವರೆಗೆ ಸಮಯ ನೀಡಿದ್ದರು. ಆ ಸಮಯ ಮುಗಿಯುತ್ತಾ ಬರುತ್ತಿರುವ ಹಿನ್ನೆಲೆಯಲ್ಲಿ ಹಳೆಯ ನೋಟು ಹೊಂದಿರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ತೀರ್ಮಾನಿಸಿದೆ. ರದ್ದಾದ ನೋಟುಗಳನ್ನು ಹೊಂದಿರುವವರಿಗೆ ದಂಡ ವಿಧಿಸಲು ಸುಗ್ರೀವಾಜ್ಞೆ ತರಬೇಕೆಂದು ಇದಕ್ಕೂ ಮುನ್ನ ಕೇಂದ್ರ ಸರ್ಕಾರ ತೀರ್ಮಾನಿಸಿತ್ತು ಎಂದು ಮೂಲಗಳು ಹೇಳುತ್ತಿವೆ. ಈ ಸಂಬಂಧ ಬುಧವಾರ ಸಚಿವ ಸಂಪುಟ ಸಭೆ ಸೇರಿ ಸುಗ್ರೀವಾಜ್ಞೆಯನ್ನು ಅನುಮೋದಿಸಿವೆ.

Loading...
loading...
error: Content is protected !!