ದೇಶಾದ್ಯಂತ 100 ಜಿ.ಎಸ್.ಟಿ ಕ್ಲಿನಿಕ್ ಗಳು, ಏನಿದರ ಉದ್ದೇಶ? – News Mirchi
We are updating the website...

ದೇಶಾದ್ಯಂತ 100 ಜಿ.ಎಸ್.ಟಿ ಕ್ಲಿನಿಕ್ ಗಳು, ಏನಿದರ ಉದ್ದೇಶ?

ನವದೆಹಲಿ: ವ್ಯಾಪಾರಿಗಳಲ್ಲಿ ಜಿಎಸ್ಟಿ(ಸರಕು ಮತ್ತು ಸೇವಾ ತೆರಿಗೆ) ಕುರಿತು ಮತ್ತಷ್ಟು ಅರಿವು ಮೂಡಿಸುವ ಸಲುವಾಗಿ ದೇಶಾದ್ಯಂತ 100 ಜಿಎಸ್ಟಿ ಕ್ಲಿನಿಕ್ ಗಳನ್ನು ತೆರೆಯುವುದಾಗಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ(ಸಿಎಐಟಿ) ಹೇಳಿದೆ. ಇದಕ್ಕಾಗಿ ಹೆಚ್.ಡಿ.ಎಫ್.ಸಿ ಬ್ಯಾಂಕ್, ಟ್ಯಾಲಿ ಸೊಲ್ಯೂಷನ್ಸ್, ಮಾಸ್ಟರ್ ಕಾರ್ಡ್ ಸಂಸ್ಥೆಗಳೊಂದಿಗೆ ಸೇರಿ ಕೆಲಸ ಮಾಡುವುದಾಗಿ ಒಕ್ಕೂಟ ಹೇಳಿದೆ. ಸದ್ಯ ಇರುವ ತೆರಿಗೆ ಪದ್ದತಿಯಿಂದ ಜಿಎಸ್ಟಿ ಗೆ ವ್ಯಾಪಾರಿಗಳು ಸುಲಭವಾಗಿ ಬದಲಾಗುವುದಕ್ಕಾಗಿ ಮೊದಲ ಅರಿವು ಮೂಡಿಸುವ ಕಾರ್ಯಕ್ರಮವನ್ನು ಜುಲೈ 1 ರಂದು ಪ್ರಾರಂಭಿಸುವುದಾಗಿ ಹೇಳಿದೆ.

ಈ ಕಾರ್ಯಕ್ರಮದಲ್ಲಿ ಜಿಎಸ್ಟಿ ಪ್ರಾಥಮಿಕ ಅಂಶಗಳೊಂದಿಗೆ ತಂತ್ರಜ್ಞಾನ ಬಳಕೆ, ಡಿಜಿಟಲ್ ಪಾವತಿಗಳನ್ನು ಜಿಎಸ್ಟಿಯೊಂದಿಗೆ ಜೋಡಣೆ ಮತ್ತಿತರ ವಿಷಯಗಳ ಕುರಿತು ವ್ಯಾಪಾರಿಗೆ ತಿಳಿಸಿಕೊಡಲಿದ್ದಾರೆ. ಜಿಎಸ್ಟಿ ಕ್ಲಿನಿಕ್ ಗಳನ್ನು ವ್ಯಾಪಾರಿ ಸಂಘಟನೆಗಳ ಕಛೇರಿಗಳು, ಮಾರುಕಟ್ಟೆಗಳು ಸೇರಿದಂತೆ ಹೆಚ್.ಡಿ.ಎಫ್.ಸಿ ಬ್ಯಾಂಕುಗಳಲ್ಲಿ ನಡೆಸುವುದಾಗಿ ಸಿಯಐಟಿ ಅಧ್ಯಕ್ಷ ಬಿಸಿ ಭರ್ತಿಯಾ, ಕಾರ್ಯದರ್ಶಿ ಪ್ರವೀಣ್ ಖಡೇವಾಲ್ ಮಾಧ್ಯಮಗಳಿಗೆ ಹೇಳಿದ್ದಾರೆ.

Contact for any Electrical Works across Bengaluru

Loading...
error: Content is protected !!