ಮಮತಾ ಸರ್ಕಾರಕ್ಕೆ ಶಾಕ್ ನೀಡಿದ ಹೈಕೋರ್ಟ್, ನಾರದಾ ಕೇಸ್ ಸಿಬಿಐಗೆ – News Mirchi
We are updating the website...

ಮಮತಾ ಸರ್ಕಾರಕ್ಕೆ ಶಾಕ್ ನೀಡಿದ ಹೈಕೋರ್ಟ್, ನಾರದಾ ಕೇಸ್ ಸಿಬಿಐಗೆ

ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರಕ್ಕೆ ಹೈಕೋರ್ಟ್ ಶಾಕ್ ನೀಡಿದೆ. ಹಲವು ತೃಣಮೂಲ ಕಾಂಗ್ರೆಸ್ ನಾಯಕರು ಲಂಚ ಪಡೆಯುತ್ತಾ ನಾರದಾ ಮ್ಯೂಸ್ ಮಾಡಿದ್ದ ಕುಟುಕು ಕಾರ್ಯಚರಣೆಯಲ್ಲಿ ಸಿಕ್ಕಿಬಿದ್ದಿದ್ದರು. ಈ ಸ್ಟಿಂಗ್ ಆಪರೇಷನ್ ನಲ್ಲಿ ಬಯಲಾದ ಲಂಚ ವ್ಯವಹಾರದ ಕುರಿತು ತನಿಖೆ ನಡೆಸಬೇಕೆಂದು ಕೋಲ್ಕತಾ ಹೈಕೋರ್ಟ್ ಶುಕ್ರವಾರ ಸಿಬಿಐ ಗೆ ಆದೇಶಿಸಿದೆ.

ಕುಟುಕು ಕಾರ್ಯಚರಣೆಯಿಂದ ಸಿಕ್ಕ ಮಾಹಿತಿ ಮತ್ತು ವಸ್ತುಗಳನ್ನು 24 ಗಂಟೆಗಳೊಳಗೆ ಸ್ವಾಧೀನಪಡಿಸಿಕೊಂಡು 72 ಗಂಟೆಗಳಲ್ಲಿ ಪ್ರಾಥಮಿಕ ತನಿಖೆ ಪೂರ್ಣಗೊಳಿಸಬೇಕೆಂದು ನ್ಯಾಯಪೀಠ ಆದೇಶಿದಿದೆ. ಪ್ರಾಥಮಿಕ ತನಿಖೆಯ ನಂತರ ಅಗತ್ಯ ಬಿದ್ದರೆ ಎಫ್ಐಆರ್ ದಾಖಲಿಸಿ ತನಿಖೆ ಮುಂದುವರೆಸಲು ಸೂಚಿಸಿದೆ. ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸುವುದಾಗಿ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕಳೆದ ವರ್ಷ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಗೂ ಮುನ್ನ ನಾರದಾ ನ್ಯೂಸ್ ನಡೆಸಿದ್ದ ಕುಟುಕು ಕಾರ್ಯಚರಣೆಯ ವೀಡಿಯೋಗಳನ್ನು ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ್ದವು. ಮೊದಲು ಈ ವೀಡಿಯೋಗಳು “ನಾರದಾನ್ಯೂಸ್.ಕಾಂ” ನಲ್ಲಿ ಪ್ರಸಾರವಾಗಿತ್ತು.

ಕೆಲ ನಾಯಕರು ಹಣ ತೆಗೆದುಕೊಳ್ಳುತ್ತಿರುವುದು ಈ ವೀಡಿಯೋದಲ್ಲಿದೆ. ಈ ವೀಡಿಯೋಗಳು ಟ್ಯಾಂಪರ್ ಮಾಡಲಾಗಿಲ್ಲ, ಅಸಲಿ ವೀಡಿಯೋ ಎಂದು ಚಂಡೀಗಢದ ಸೆಂಟದರಲ್ ಫೋರೆನ್ಸಿಕ್ಸ್ ಸೈನ್ಸ್ ಲ್ಯಾಬೊರೇಟರಿ ನೀಡಿದ ವರದಿಯನ್ನು ಗಣನೆಗೆ ತೆಗೆದುಕೊಂಡ ಕೋರ್ಟ್, ಪ್ರಕರಣದಲ್ಲಿ ಸಚಿವರು, ಸಂಸದರು, ಪ್ರಮುಖ ನಾಯಕರು ಇರುವುದರಿಂದ ಸಿಬಿಐ ನಿಂದ ಮಾತ್ರ ಸ್ವತಂತ್ರವಾಗಿ ತನಿಖೆ ನಡೆಸಲು ಸಾಧ್ಯ ಎಂದು ಹೇಳಿದೆ.

ಸ್ಟಿಂಗ್ ಆಪರೇಷನ್ ನಾಟಕ: ಹೈಕೋರ್ಟ್ ಆದೇಶ ದುರದೃಷ್ಡಕರ, ಇದನ್ನು ರಾಜಕೀಯವಾಗಿ, ಕಾನೂನಿನಡಿಯಲ್ಲಿ ಎದುರಿಸುತ್ತೇವೆ ಎಂದು ಮಮತಾ ಹೇಳಿದ್ದಾರೆ. ಸ್ವಿಂಗ್ ಆಪರೇಷನ್ ಒಂದು ನಾಟಕವಾಗಿದ್ದು, ಬಿಜೆಪಿ ಕಛೇರಿಯಲ್ಲಿ ಈ ವೀಡಿಯೋ ಬಿಡುಗಡೆ ಮಾಡಲಾಗಿದೆ ಎಂದು ಮಮತಾ ಆರೋಪಿಸಿದ್ದಾರೆ. ಲಂಚ ಪಡೆಯುತ್ತಾ ಕಾಣಿಸಿಕೊಂಡಿರುವ ಟಿಎಂಸಿ ಸಂಸದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಡಪಕ್ಷಗಳು ಲೋಕಸಭೆಯಲ್ಲಿ ಒತ್ತಾಯ ಮಾಡಿದವು. ತನಿಖೆಯ ವ್ಯಾಪ್ತಿಗೆ ಮುಖ್ಯಮಂತ್ರಿಯನ್ನೂ ತರಬೇಕೆಂದು ಎಡಪಕ್ಷಗಳು ಕೋಲ್ಕತಾದಲ್ಲಿ ದೊಡ್ಡ ರ‌್ಯಾಲಿಯನ್ನು ನಡೆಸಿದವು.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!