ತಾಯಂದಿರ ಎದೆಹಾಲು ರಫ್ತು ನಿಷೇಧಿಸಿದ ಕಾಂಬೋಡಿಯಾ

ಕಾಂಬೋಡಿಯಾದಲ್ಲಿ ತಾಯಂದಿರ ಎದೆಹಾಲನ್ನು ಖರೀದಿಸಿ ಅಮೆರಿಕಕ್ಕೆ ರಫ್ತು ಮಾಡುತ್ತಿರುವುದನ್ನು ಕಾಂಬೋಡಿಯಾ ಸರ್ಕಾರ ನಿಷೇಧಿಸಿದೆ. ಬಡತನದ ಕಾರಣದಿಂದ ಇಲ್ಲಿನ ಮಹಿಳೆಯರು ಎದೆಹಾಲು ಮಾರಾಟಕ್ಕೆ ಮುಂದಾಗುತ್ತಿರುವ ಕುರಿತು ವರದಿಗಳು ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಕಾಂಬೋಡಿಯಾ ಸರ್ಕಾರ ಈ ಕ್ರಮ ಕೈಗೊಂಡಿದೆ.

ಇಲ್ಲಿ ಉಟಾದಲ್ಲಿರುವ ಅಂಬ್ರೋಸಿಯಾ ಪ್ರಯೋಗಾಲಯದಲ್ಲಿ ಇಲ್ಲಿಯವರೆಗೂ ಬಡ ತಾಯಂದಿರ ಎದೆಹಾಲಿನ ರಫ್ತು ನಡೆಯುತ್ತಿತ್ತು. ಬಡ ತಾಯಂದಿರಿಂದ ಪಂಪ್ ಮಾಡಿ ಸಂಗ್ರಹಿಸಿದ ಹಾಲನ್ನು ಅಮೆರಿಕಕ್ಕೆ ಕಳುಹಿಸುತ್ತಿದ್ದರು. ನಂತರ ಅಮೆರಿಕದಲ್ಲಿ ವೈಜ್ಞಾನಿಕ ಪದ್ದತಿಯಲ್ಲಿ ಅದನ್ನು ಶುದ್ಧಿಕರಿಸಿ 147 ಮಿ.ಲೀ ಹಾಲನ್ನು 20 ಡಾಲರ್‌ಗೆ ಮಾರುತ್ತಿದ್ದರು. ಹೆರಿಗೆಯ ನಂತರ ಹಾಲು ಸರಿಯಾಗಿ ಆಗದ ಅಮೆರಿಕಾ ತಾಯಂದಿರು ಈ ಹಾಲನ್ನು ತಮ್ಮ ಮಕ್ಕಳಿಗೆ ನಿಡುತ್ತಿದ್ದರು.

ಕಾಂಬೋಡಿಯಾ ಬಡ ದೇಶವಾದರೂ, ತಾಯಂದಿರ ಎದೆಹಾಲನ್ನು ಮಾರಾಟ ಮಾಡುವ ಮಟ್ಟಕ್ಕೆ ಇಳಿದಿಲ್ಲ ಎಂದು ಅಲ್ಲಿನ ಸರ್ಕಾರ ಹೇಳಿದೆ.