ದಿನಕ್ಕೊಂದು ಚಾಕೊಲೇಟ್, ಟೈಪ್-2 ಮಧುಮೇಹವನ್ನು ದೂರವಿಡುತ್ತಂತೆ! – News Mirchi

ದಿನಕ್ಕೊಂದು ಚಾಕೊಲೇಟ್, ಟೈಪ್-2 ಮಧುಮೇಹವನ್ನು ದೂರವಿಡುತ್ತಂತೆ!

ಮಧುಮೇಹ ಹೊಂದಿರುವವರು ಸಿಹಿ ಪದಾರ್ಥಗಳಿಂದ ದೂರವಿರಬೇಕು, ಚಾಕ್ಲೆಟ್ ಅಥವಾ ಸಿಹಿ ಪದಾರ್ಥವನ್ನೋ ತಿಂದರೆ ಅವರಲ್ಲಿ ಶುಗರ್ ಪ್ರಮಾಣ ಹೆಚ್ಚಾಗುತ್ತದೆ ಎನ್ನುತ್ತಾರೆ. ಆದರೆ ಪ್ರತಿ ದಿನ ಒಂದು ಚಾಕ್ಲೆಟ್ ತಿನ್ನುವುದರಿಂದ ಮಧುಮೇಹವನ್ನು ದೂರವಿಡಬಹುದು ಎನ್ನುತ್ತಿದ್ದಾರೆ ಸಂಶೋಧಕರು. ಕೇಳಲು ಆಶ್ಚರ್ಯವೆನಿಸಿದರೂ ವೈಜ್ಞಾನಿಕವಾಗಿ ಇದನ್ನು ಸಂಶೋಧಕರು ಸಾಬೀತು ಮಾಡಿದ್ದಾರೆ.

ಮಧುಮೇಹ ಹೊಂದಿರುವ ವ್ಯಕ್ತಿಯ ದೇಹವು ಸಾಕಷ್ಟು ಇನ್ಸುಲಿನ್ ಉತ್ಪಾದಿಸುವುದಿಲ್ಲ. ಬೀಟಾ ಕಣಗಳ ವಿಫಲತೆ ಇದಕ್ಕೆ ಕಾರಣ. ಚಾಕ್ಲೆಟ್ ನಲ್ಲಿರುವ ಕೊಕೊವಾ ಅಂಶವು ದೇಹವು ಹೆಚ್ಚು ಇನ್ಸುಲಿನ್ ಅನ್ನು ಬಿಡುಗಡೆ ಮಾಡಲು ಸಹಕಾರಿಯಾಗುತ್ತದೆ. ಪ್ರತಿ ದಿನ ಒಂದು ಚಾಕ್ಲೆಟ್ ತಿಂದರೆ ಟೈಪ್ 2 ಡಯಾಬಿಟೀಸ್ ಬರದಂತೆ ತಡೆಯಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ಒತ್ತಡವನ್ನು ನಿಯಂತ್ರಿಸಿ ಬೀಟಾ ಕಣಗಳನ್ನು ಪುನಶ್ಚೇತನಗೊಳಿಸುವ ಗುಣವೂ ಈ ಚಾಕ್ಲೆಟ್ ಗಳಲ್ಲಿದೆ ಎಂದು ಬ್ರಿಗ್ ಹ್ಯಾಮ್ ಯಂಗ್ ಯೂನಿವರ್ಸಿಟಿ ಸಂಶೋಧಕರು ಹೇಳಿದ್ದಾರೆ. ಕೊಕೋವಾ ಮೇಲೆ ದಶಕಗಳಿಂದ ಹಲವು ಸಂಶೋಧನೆಗಳು ನಡೆದರೂ, ಇದರ ನಿರ್ದಿಷ್ಟ ಪ್ರಯೋಜನದ ಬಗ್ಗೆ ವಿಶ್ಲೇಷಿಸಿ ನಡೆದ ಅಧ್ಯಯನ ಇದೇ ಮೊದಲು ಎಂದು ಸಂಶೋಧಕರು ಹೇಳಿಕೊಂಡಿದ್ದಾರೆ.

ಇನ್ಸುಲಿನ್ ಉತ್ಪಾದಿಸುವಲ್ಲಿ ಸಹಕಾರಿಯಾಗುವ ಬೀಟಾ ಕೋಶಗಳು ಚುರುಕಾಗಿ ಕೆಲಸ ಮಾಡಲು ಪ್ರೋತ್ಸಾಹಿಸುವ ಪದಾರ್ಥಗಳು ಕೊಕೋವಾದಲ್ಲಿ ಸಾಕಷ್ಟಿವೆ ಎಂದು ಜರ್ನಲ್ ಆಫ್ ನ್ಯೂಟ್ರೀಷನಲ್ ಬಯೋಕೆಮಿಸ್ಟ್ರಿಯಲ್ಲಿ ಪ್ರಕಟವಾದ ಅಧ್ಯಯನವೂ ಕೂಡಾ ಇದನ್ನೇ ಹೇಳಿದೆ.

Contact for any Electrical Works across Bengaluru

Loading...
error: Content is protected !!