ಚುನಾವಣೆ ನಂತರ ಬಡ್ಜೆಟ್ ಮಂಡಿಸಿ: ಪ್ರತಿಪಕ್ಷಗಳು

***

ದೇಶದಲ್ಲಿ ಐದು ರಾಜ್ಯಗಳ ಚುನಾವಣೆಗೆ ಚುನಾವಣಾ ಅಯೋಗ ಮಹೂರ್ತ ನಿಗಧಿಪಡಿಸಿದೆ. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಖಂಡ, ಮಣಿಪುರ ರಾಜ್ಯಗಳ ಚುನಾವಣೆ ಮುಗಿದ ನಂತರವೇ ಕೇಂದ್ರ ಬಡ್ಜೆಟ್ ಮಂಡಿಸಬೇಕು ಎಂದು ಪ್ರತಿಪಕ್ಷಗಳು ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿವೆ.

ಜನವರಿ31 ರಿಂದ ಆರಂಭವಾಗಲಿರುವ ಪಾರ್ಲಿಮೆಂಟ್ ಬಡ್ಜೆಟ್ ಅಧಿವೇಶನ ಆರಂಭವಾಗಲಿದ್ದು, ಫೆಬ್ರವರಿ 1ರಂದು ಸಾಮಾನ್ಯ ಬಡ್ಜೆಟ್ ಮಂಡಿಸುವುದಾಗಿ ಈಗಾಗಲೇ ಕೇಂದ್ರ ಸರ್ಕಾರ ಹೇಳಿದೆ. ಇ ಹಿನ್ನೆಯಲ್ಲಿ ಕಾಂಗ್ರೆಸ್, ಡಿಎಂಕೆ, ಜೆಡಿಯು ಸೇರಿದಂತೆ ವಿವಿಧ ಪಕ್ಷಗಳ 11 ಪ್ರತಿನಿಧಿಗಳ ತಂಡ ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿದರು.

ಚುನಾವಣೆಗೂ ಮುನ್ನ ಬಡ್ಜೆಟ್ ಮಂಡಿಸಿ ಕೇಂದ್ರ ಸರ್ಕಾರ ಜನರನ್ನು ಮರಳುಮಾಡುವ ಸಾಧ್ಯತೆ ಇದೆ ಎಂದು ಪ್ರತಿಪಕ್ಷ ನಾಯಕರು ದೂರು ನೀಡಿದ್ದಾರೆ. ಹೀಗೆ ಮಾಡಿದರೆ ನೀತಿ ಸಂಹಿತೆ ಉಲ್ಲಂಘಿಸಿದಂತೆ ಆಗುತ್ತದೆ ಎಂದು ಅವರು ವಾದಿಸಿದ್ದಾರೆ. ಐದು ರಾಜ್ಯಗಳ ಚುನಾವಣೆ ಮುಗಿದ ನಂತರ ಬಡ್ಜೆಟ್ ಅನ್ನು ಮಾರ್ಚ್ 8 ರಂದು ಮಂಡಿಸಿದರೆ, ಮಾರ್ಚ್ 31 ರೊಳಗೆ ಅದನ್ನು ಅನುಮೋದಿಸಲಯ ಪಡೆಯಲು ಸಾಕಷ್ಟು ಕಾಲಾವಕಾಶ ಸಿಗುತ್ತದೆ ಎಂದು ಹೇಳಿದ್ದಾರೆ.