ಟಿಪ್ಪು ಕಾಲದಲ್ಲಿ ಬಳಸುತ್ತಿದ್ದ ಫಿರಂಗಿ ಗುಂಡುಗಳು ಪತ್ತೆ – News Mirchi

ಟಿಪ್ಪು ಕಾಲದಲ್ಲಿ ಬಳಸುತ್ತಿದ್ದ ಫಿರಂಗಿ ಗುಂಡುಗಳು ಪತ್ತೆ

ಬೆಂಗಳೂರು: ಟಿಪ್ಪು ಸುಲ್ತಾನ್ ಕಾಲದಲ್ಲಿ ಫಿರಂಗಿಗಳಲ್ಲಿ ಬಳಸುತ್ತಿದ್ದ 19 ಗುಂಡುಗಳು ಬೆಂಗಳೂರಿನ ಟಿಪ್ಪು ಅರಮನೆ ಸಮೀಪ ಪತ್ತೆಯಾಗಿವೆ. ಪತ್ತೆಯಾದ ಫಿರಂಗಿ ಗುಂಡುಗಳು 18 ನೇ ಶತಮಾನಕ್ಕೆ ಸೇರಿದವು ಎನ್ನಲಾಗುತ್ತಿದ್ದು, ಕರ್ನಾಟಕ ಚಲನಚಿತ್ರ ಕಲಾವಿದರ ಕ್ಲಬ್ ಗೆ ಸೇರಿದ ಕಟ್ಟಡದ ಆವರಣದಲ್ಲಿ ಗುಂಡಿ ತೋಡುವಾಗ ಪತ್ತೆಯಾಗಿವೆ.

ಆರಂಭದಲ್ಲಿ ಒಂದು ಗುಂಡು ಪತ್ತೆಯಾದಾಗ, ಆ ಜಾಗದಲ್ಲಿ ನಿಧಿ ಇರಬಹುದೆಂದು ಕೆಲಸಗಾರರು ಭಾವಿಸಿ ಮತ್ತಷ್ಟು ಅಗೆಯುತ್ತಾ ಹೋಗಿದ್ದಾರೆ. ಹೀಗೆ ಅಗೆಯುತ್ತಿದ್ದಂತೆ ಒಟ್ಟು 19 ಗುಂಡುಗಳು ಪತ್ತೆಯಾಗಿವೆ. ಮತ್ತಷ್ಟು ಗುಂಡುಗಳು ಇರಬಹುದು ಎನ್ನಲಾಗುತ್ತಿದೆ.

ಈಗ ಪತ್ತೆಯಾಗಿರುವ ಕಲ್ಲು ಗುಂಡುಗಳು ಸೈನೈಟ್ ಕಲ್ಲುಗಳು ಎನ್ನಲಾಗಿದ್ದು ಫಿರಂಗಿಗಳ ಮೂಲಕ ಶತೃಗಳ ಮೇಲೆ ಈ ಗುಂಡುಗಳನ್ನು ಹಾರಿಸಲಾಗುತ್ತಿತ್ತು.

Click for More Interesting News

Loading...

Leave a Reply

Your email address will not be published.

error: Content is protected !!