ಈ ನಕಲಿ ಆಧಾರ್ ವೆಬ್ಸೈಟ್ ಗಳನ್ನು ನಂಬದಿರಿ

ಆಧಾರ್ ಮಾಹಿತಿಯನ್ನು ಅನಧಿಕೃತವಾಗಿ ಸಂಗ್ರಹಿಸುತ್ತಿದ್ದ 8 ನಕಲಿ ವೆಬ್ಸೈಟ್ ಗಳ ವಿರುದ್ಧ ಯುಐಡಿಐಎ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಹಲವು ಸೆಕ್ಷನ್ ಗಳ ಅಡಿಯಲ್ಲಿ ಈ ಎಂಟೂ ವೆಬ್ಸೈಟ್ ಮಾಲೀಕರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಧಾರ್ ಹೆಸರನಲ್ಲಿ ಚಾಲ್ತಿಯಲ್ಲಿದ್ದ aadhaarupdate.com, aadhaarindia.com, pvcaadhaar.in, aadhaarprinters.com, geteaadhaar.com, downloadaadhaarcard.in, aadharcopy.in, duplicateaadharcard.com ಎಂಬ ವೆಬ್ಸೈಟ್ ಗಳಿಂದ ಆಧಾರ್ ಗೆ ಸಂಬಂಧಿಸಿದಂತೆ ಮಾಹಿತಿ ನೀಡುತ್ತಿರುವಂತೆ ನಂಬಿಸಿ ಜನರ ಆಧಾರ್ ಮಾಹಿತಿಯನ್ನು ಸಂಗ್ರಹಿಸುತ್ತಿದ್ದರು. ಇದನ್ನು ಗಮನಿಸಿದ ಯುಐಡಿಎಐ ಅಧಿಕಾರಿಗಳು ಎಚ್ಚರಿಸಿದರೂ, ತಮ್ಮ ನಡವಳಿಕೆಯನ್ನು ತಿದ್ದಿಕೊಳ್ಳದ ಇವರ ವಿರುದ್ಧ ದೂರು ನೀಡಿದ್ದಾರೆ.

ಇಂತಹ ನಕಲಿ ವೆಬ್ಸೈಟ್ ಗಳನ್ನು ನಂಬಬಾರದೆಂದು ಮನವಿ ಮಾಡಿರುವ ಅಧಿಕಾರಿಗಳು, ಆಧಾರ್ ಸಂಬಂಧಿತ ಯಾವುದೇ ಸೇವೆಗಳನ್ನು ಅಧಿಕೃತ ವೆಬ್ಸೈಟ್ www.uiadai.gov.in ಮೂಲಕವೇ ಪಡೆಯಬೇಕೆಂದು ಸೂಚಿಸಿದ್ದಾರೆ.