ಹಾಗೆಯೇ ಇವರನ್ನೆಲ್ಲಾ ಕೊಲ್ಲಬೇಕೆಂದು ಫೇಸ್ಬುಕ್ ಪೋಸ್ಟ್, ಸಾಗರಿಕಾ ಘೋಷ್ ದೂರು – News Mirchi

ಹಾಗೆಯೇ ಇವರನ್ನೆಲ್ಲಾ ಕೊಲ್ಲಬೇಕೆಂದು ಫೇಸ್ಬುಕ್ ಪೋಸ್ಟ್, ಸಾಗರಿಕಾ ಘೋಷ್ ದೂರು

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಬೆನ್ನಲ್ಲೇ ಮತ್ತೊಬ್ಬ ಪತ್ರಕರ್ತೆಯಾದ ಸಾಗರಿಕಾ ಘೋಷ್ ಅವರಿಗೆ ಜೀವ ಬೆದರಿಕೆ ಬಂದಿದೆಯಂತೆ. ಗೌರಿ ಲಂಕೇಶ್ ಅವರಂತೆಯೇ ಸಾಗರಿಕಾ ಘೋಷ್ ಅವರನ್ನೂ ಕೊಲ್ಲಬೇಕೆಂದು ವ್ಯಕ್ತಿಯೊಬ್ಬ ಪೋಸ್ಟ್ ಮಾಡಿದ್ದಾನೆ.

ಸಾಮಾಜಿಕ ಕಾರ್ಯಕರ್ತರ ಹೆಸರಿನಲ್ಲಿ ದೇಶವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವವರೆಲ್ಲರಿಗೂ ಗೌರಿ ಲಂಕೇಶ್ ಹತ್ಯೆ ಒಂದು ಉದಾಹರಣೆಯಾಗಬೇಕು ಎಂದು ವಿಕ್ರಮಾದಿತ್ಯ ರಾಣಾ ಎಂಬ ಹೆಸರಿನಿಂದ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ಕುರಿತು ಸಾಗರಿಕಾ ಘೋಷ್ ದೂರು ನೀಡಿದ್ದು, ತನಿಖೆ ನಡೆಸುತ್ತಿರುವ ಪೊಲೀಸರು ಹೇಳಿದ್ದಾರೆ. ಐಟಿ ಕಾಯ್ದೆಯಡಿ ಕೇಸು ದಾಖಲಿಸಿಕೊಂಡಿದ್ದಾಗಿ ಪೊಲೀಸರು ಆರೋಪಿ ಪತ್ತೆಗೆ ಮುಂದಾಗಿದ್ದಾರೆ.

ಕೇವಲ ಸಾಗರಿಕಾ ಘೋಷ್, ಅಲ್ಲ ಶೋಭಾ ಡೇ, ಅರುಂಧತಿ ರಾಯ್, ಕವಿತಾ ಕೃಷ್ಣನ್, ಶೀಲಾ ರಷೀದ್ ಮುಂತಾದ ದೇಶವಿರೋಧಿಗಳನ್ನೆಲ್ಲಾ ಕೊಲ್ಲಬೇಕು. ಇಂತಹವರನ್ನೆಲ್ಲಾ ಒಂದು ಹಿಟ್ ಲಿಸ್ಟ್ ತಯಾರಿಸಿ ನಾಶಪಡಿಸಬೇಕು. ಸಮಾಜಕ್ಕೆ ಒಳಿತು ಮಾಡುತ್ತೇವೆಂಬ ಮುಸುಕು ಹಾಕಿಕೊಂಡು ದೇಶವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವವರನ್ನೆಲ್ಲಾ ಪಟ್ಟಿ ಮಾಡಿ ಸಾಯಿಸಬೇಕು ಎಂದು ಸಾಮಾಜಿಕ ತಾಣದಲ್ಲಿ ಆ ವ್ಯಕ್ತಿ ಬರೆದಿದ್ದ.

Loading...