ಚಿಕ್ಕಬಳ್ಳಾಪುರ: ವೈಚಕೂರಹಳ್ಳಿ ದೇಶದ ಮೊದಲ ಹೊಗೆ ರಹಿತ ಗ್ರಾಮವಾಗಿ ಲಿಮ್ಕಾ ದಾಖಲೆ – News Mirchi

ಚಿಕ್ಕಬಳ್ಳಾಪುರ: ವೈಚಕೂರಹಳ್ಳಿ ದೇಶದ ಮೊದಲ ಹೊಗೆ ರಹಿತ ಗ್ರಾಮವಾಗಿ ಲಿಮ್ಕಾ ದಾಖಲೆ

ಚಿಕ್ಕಬಳ್ಳಾಪುರ: ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ವೈಚಕೂರಳ್ಳಿ ಗ್ರಾಮವು ಅಪರೂಪದ ದಾಖಲೆ ಮಾಡಿದೆ. ದೇಶದ ಮೊದಲ ಹೊಗೆರಹಿತ ಗ್ರಾಮವಾಗಿ ಲಿಮ್ಕಾ ದಾಖಲೆಗೇರಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಅಧಿಕಾರಿಗಳು ಹೇಳುವಂತೆ, ಗ್ರಾಮದ ಎಲ್ಲಾ ಕುಟುಂಬಗಳು ಎಲ್ಪಿಜಿ ಆಧಾರಿತ ಅಡುಗೆ ವ್ಯವಸ್ಥೆಗೆ ಬದಲಾಗಿದ್ದು, ದೇಶದ ಮೊದಲ ಹೊಗೆ ರಹಿತ ಗ್ರಾಮವಾಗಿ ಲಿಮ್ಕಾ ರೆಕಾರ್ಡ್ಸ್ ನಲ್ಲಿ ಸ್ಥಾನಗಳಿಸಿದೆ.

ಪ್ರಧಾನಮಂತ್ರಿ “ಉಜ್ವಲ” ಯೋಜನೆಯಡಿಯಲ್ಲಿ ಗ್ರಾಮದ 274 ಕುಟುಂಬಗಳು ಉಚಿತ ಎಲ್ಪಿಜಿ ಸಂಪರ್ಕವನ್ನು ಪಡೆಯುವ ಮೂಲಕ ಕೇಂದ್ರ ಸರ್ಕಾರದ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಈ ಹೆಗ್ಗಳಿಕೆಗೆ ಪಾತ್ರವಾಗಿದೆ.

ಡಿಸೆಂಬರ್ 2015 ರಲ್ಲೇ ಕೇಂದ್ರ ಸರ್ಕಾರ ಈ ಹಳ್ಳಿಯನ್ನು ಹೊಗೆರಹಿತ ಗ್ರಾಮವೆಂದು ಘೋಷಿಸುತ್ತು. ಆದರೆ ಈಗ ಅದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆಯುವ ಮೂಲಕ ಮತ್ತೆ ಸುದ್ದಿಯಾಗಿದೆ.

Loading...