ಅಗಸ್ಟಾ ಹೆಲಿಕಾಪ್ಟರ್ ಹಗರಣ: ಎಸ್.ಪಿ ತ್ಯಾಗಿ ಬಂಧನ – News Mirchi

ಅಗಸ್ಟಾ ಹೆಲಿಕಾಪ್ಟರ್ ಹಗರಣ: ಎಸ್.ಪಿ ತ್ಯಾಗಿ ಬಂಧನ

ನವದೆಹಲಿ: ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಗಳ ಖರೀದಿ ಹಗರಣದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ವಾಯು ಪಡೆಯ ಮಾಜಿ ಮುಖ್ಯಸ್ಥ ಎಸ್.ಪಿ.ತ್ಯಾಗಿ ಅವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ದೆಹಲಿಯ ವಕೀಲ ಗೌತಮ್ ಖೈತಾನ್, ಸಂಜೀವ್ ತ್ಯಾಗಿ ಅಲಿಯಾಸ್ ಜೂಲಿ ತ್ಯಾಗಿಯವರನ್ನೂ ಕೂಡಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಅಗಸ್ಟಾ ವೆಸ್ಟ್ ಲ್ಯಾಂಡ್ ಒಪ್ಪಂದದಲ್ಲಿ ಈ ಮೂವರು ಅಕ್ರಮವೆಸಗಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಕಳೆದ ಮೇ ತಿಂಗಳಲ್ಲಿ ಎಸ್.ಪಿ ತ್ಯಾಗಿ ಮತ್ತು ಆತನ ಸಹೋದರನನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದರು.

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ಭಾರತ ಸರ್ಕಾರ ಹಿರಿಯ ರಾಜಕೀಯ ಮುಖಂಡರ ಬಳಕೆಗಾಗಿ 2010 ರಲ್ಲಿ ರೂ. 3600 ಕೋಟಿ ವೆಚ್ಚದಲ್ಲಿ 12 ಹೆಲಿಕಾಪ್ಟರ್ ಖರೀದಿಗೆ ಆದೇಶಿಸಿತ್ತು. ಆ ಹೆಲಿಕಾಪ್ಟರ್ ಗಳನ್ನು ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿ ಸರಬರಾಜು ಮಾಡಿತ್ತು. ಅದರ ಮಾತೃಸಂಸ್ಥೆ ಫಿನ್ ಮೆಕ್ಯಾನಿಕಾ ಇಟಲಿಯಲ್ಲಿ ಲಂಚ ನೀಡಿದೆ ಎಂಬ ಆರೋಪಗಳಿವೆ. ತನಿಖೆಯಲ್ಲಿ ಭಾರತದಲ್ಲೂ ಲಂಚ ನೀಡಿರುವ ಮಾತುಗಳು ಕೇಳಿ ಬಂದವು.

ಭಾರತೀಯ ಅಧಿಕಾರಿಗಳು ಅಗಸ್ಟಾ ಹೆಲಿಕಾಪ್ಟರ್ ಗಳನ್ನು ಆಯ್ಕೆ ಮಾಡುವಂತೆ ಮಾಡಲು ಬ್ರಿಟಿಷ್ ಉದ್ಯಮಿ ಮೈಖೇಲ್ ಹಾಗೂ ಇಟಲಿಯ ಮತ್ತೊಬ್ಬರು ಪ್ರಭಾವ ಬೀರಿದ್ದರು ಎಂದು ಇಟಲಿಯ ಕೋರ್ಟಿನಲ್ಲಿ ಅಲ್ಲಿನ ವಕೀಲರು ವಾದಿಸಿದ್ದರು. ಅಗಸ್ಟಾ ಕಂಪನಿ ಭಾರತೀಯ ಅಧಿಕಾರಿಗಳಿಗೆ ₹330 ಕೋಟಿವರೆಗೂ ಲಂಚ ತಲುಪಿಸಲು ಬ್ರಿಟೀಷ್ ಉದ್ಯಮಿ ಮೈಖೇಲ್ ರನ್ನು ಮಧ್ಯವರ್ತಿಯನ್ನಾಗಿ ನೇಮಕ ಮಾಡಿಕೊಂಡಿದ್ದರು ಎಂದು ಹೇಳಿದ್ದಾರೆ.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!