ಕಾಳ ಧನಿಕರಿಗೆ ಸಹಕರಿಸಿದ ಬ್ಯಾಂಕ್ ಸಿಬ್ಬಂದಿ ಮೇಲೆ ಸಿಬಿ’ಐ’

ಹಳೆಯ ನೋಟು ರದ್ದು ಕ್ರಮ ಯಶಸ್ವಿಯಾಗಲು ಜನ ಸಾಮಾನ್ಯರ ಬೆಂಬಲ ಮಾತ್ರವಲ್ಲ, ಬ್ಯಾಂಕ್ ಸಿಬ್ಬಂದಿಯೂ ಅವರ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು. ಆದರೆ ಅದೇ ಬ್ಯಾಂಕು ಮ್ಯಾನೇಜರ್ ಗಳೇ ಭಾರೀ ಭ್ರಷ್ಟಾಚಾರಕ್ಕೆ ಮುಂದಾಗುತ್ತಿದ್ದಾರೆ. ಭಾರೀ ಮೊತ್ತದ ಕಮೀಷನ್ ಆಸೆಗೆ ಕಪ್ಪು ಹಣವನ್ನು ಬಿಳಿ ಮಾಡಲು ಕಾಳ ಧನಿಕರಿಗೆ ಸಹಕರಿಸುತ್ತಿದ್ದಾರೆ.

ಈ ವಿಷಯ ಆರ್‌ಬಿಐ ಅಧಿಕಾರಿಗಳ ಗಮನಕ್ಕೂ ಬಂದಿದ್ದು, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗುತ್ತಿದ್ದಾರೆ. ಈ ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಅರ್‌ಬಿ‌ಐ ಹಿರಿಯ ಅಧಿಕಾರಿಗಳು ಸಿಬಿಐ ಗೆ ದೂರು ನೀಡಿದ್ದಾರೆ. ಹೀಗಾಗಿ ಕಾಳ ಧನಿಕರಿಗೆ ಸಹಕರಿಸಿದ ಬ್ಯಾಂಕ್ ಉದ್ಯೋಗಿಗಳ ಕುರಿತ ತನಿಖೆಗೆ ಸಿಬಿಐ ಕಣಕ್ಕಿಳಿದಿದೆ.

ಬ್ಯಾಂಕ್ ಮ್ಯಾನೇಜರ್ ಗಳು ಹೊಸ ನೋಟುಗಳನ್ನು ಮಾರಿಕೊಳ್ಳುತ್ತಿದ್ದಾರೆ. ನಗದು ಬದಲಾವಣೆಗೆ ಬಂದ ಜನಸಾಮಾನ್ಯರ ಗುರುತಿನ ಚೀಟಿಗಳನ್ನೇ ಜೆರಾಕ್ಸ್ ಮಾಡಿ ಅವುಗಳನ್ನೆ ಹಲವು ಬಾರಿ ಬಳಸಿ ವಿತ್ ಡ್ರಾ ಮಾಡಿ ಸದ್ದಿಲ್ಲದೆ ಕಾಳ ಧನಿಕರಿಗೆ ಮಾರಿರುವುದು ತಿಳಿದು ಬಂದಿದೆ. ಹೀಗಾಗಿ ಇದೀಗ ವಿಷಯವನ್ನು ಆರ್‌ಬಿಐ ಗಂಭೀರವಾಗಿ ಪರಿಗಣಿಸಿದ್ದು ಸಿಬಿಐ ಅನ್ನು ಕಣಕ್ಕಿಳಿಸಿದೆ.