ಗುರ್ಮೀತ್ ವಿರುದ್ಧ ತೀರ್ಪು ನೀಡಿದ ನ್ಯಾಯಾಧೀಶರಿಗೆ ಜಡ್ ಪ್ಲಸ್ ಭದ್ರತೆ – News Mirchi

ಗುರ್ಮೀತ್ ವಿರುದ್ಧ ತೀರ್ಪು ನೀಡಿದ ನ್ಯಾಯಾಧೀಶರಿಗೆ ಜಡ್ ಪ್ಲಸ್ ಭದ್ರತೆ

ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಗದೀಪ್ ಸಿಂಗ್ ಅವರಿಗೆ ಸರ್ಕಾರ ಜಡ್ ಪ್ಲಸ್ ಭದ್ರತೆಯನ್ನು ಒದಗಿಸಿದೆ. ಎರಡು ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ನನ್ನು ನ್ಯಾಯಾಧೀಶ ಜಗದೀಪ್ ಸಿಂಗ್ ಅವರು ದೋಷಿ ಎಂದು ತೀರ್ಮಾನಿಸಿ 20 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದಾರೆ.

ಇದರೆ ಬೆನ್ನಲ್ಲೇ ಗುರ್ಮೀತ್ ಬೆಂಬಲಿಗರಿಂದ ನ್ಯಾಯಾಧೀಶ ಜಗದೀಪ್ ಸಿಂಗ್ ಅವರಿಗೆ ಹಲವು ಬಾರಿ ಬೆದರಿಕೆಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಅವರ ಭದ್ರತೆಯನ್ನು ಹೆಚ್ಚಳ ಮಾಡಿದೆ. ಜಡ್ ಪ್ಲಸ್ ಭದ್ರತೆಯಲ್ಲಿ ಒಟ್ಟು 55 ಪೊಲೀಸರನ್ನು ರಕ್ಷಣೆಗೆ ನೀಡಲಾಗಿದ್ದು, 10 ಎನ್.ಎಸ್.ಜಿ ಕಮ್ಯಾಂಡೋಗಳು ನ್ಯಾಯಾಧೀಶರು ಸೇರಿದಂತೆ ಅವರು ಕುಟುಂಬಕ್ಕೆ ರಕ್ಷಣೆ ನೀಡಲಿದ್ದಾರೆ.

Loading...