ಪರೀಕ್ಷೆಗಳನ್ನು ಹಬ್ಬಗಳಂತೆ ಆಚರಿಸಿ : ಮೋದಿ

***

ಪರೀಕ್ಷೆಗಳ ಸಂದರ್ಭದಲ್ಲಿ ಒತ್ತಡದಿಂದ ಹೊರಬನ್ನಿ, ಪರೀಕ್ಷೆಗಳನ್ನು ಹಬ್ಬಗಳಂತೆ ಆಚರಿಸಿ ಎಂದು ಪ್ರಧಾನಿ ಮೋದಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ. 2017 ರಲ್ಲಿ ಮೊದಲ ರೇಡಿಯೋ ಕಾರ್ಯಕ್ರಮ “ಮನ್ ಕೀ ಬಾತ್” ನಲ್ಲಿ ಮಾತನಾಡಿದರು.

ಪರೀಕ್ಷೆಗಳ ಸಂದರ್ಭದಲ್ಲಿ ಹಬ್ಬದ ವಾತಾವರಣವಿರಬೇಕು, ಹೀಗಾದಾಗ ಪ್ರೆಷರ್ ಅನ್ನೋದು ಪ್ಲೆಷರ್ ಆಗಿ ಬದಲಾಗುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚು ನಗುತ್ತಿರಿ ಹೆಚ್ಚು ಅಂಕ ಪಡೆಯಿರಿ ಎಂದು ಹೇಳಲು ಬಯಸುತ್ತೇನೆ ಎಂದು ಹೇಳಿದರು. ಮನಸ್ಸು ಶಾಂತವಾಗಿದ್ದಾಗ ನೆನಪಿನ‌ ಶಕ್ತಿ ಹೆಚ್ಚು, ಅದೇ ಜ್ಞಾಪಕಶಕ್ತಿಗೆ ಟಾನಿಕ್. ಖುಷಿಯಿಂದ ಇರುವ ಮನಸ್ಸೇ ಉತ್ತಮ ಅಂಕಪಟ್ಟಿ ಎಂದು ಮೋದಿ ಹೇಳಿದರು.

ಪರೀಕ್ಷೆಗಳು ಕೇವಲ ಆ ವರ್ಷಕ್ಕಷ್ಟೇ, ಜೀವನಪೂರ್ತಿ ಇರುವುದಿಲ್ಲ. ಕೆಲವೊಮ್ಮೆ ಪರೀಕ್ಷೆಗಳನ್ನು ನಾವು ಸರಿಯಾದ ದೃಷ್ಟಿಕೋನದಿಂದ ನೋಡುವುದಿಲ್ಲ, ಪರೀಕ್ಷೆಗಳು ಜಿವನದಲ್ಲಿ ಯಶಸ್ಸಿಗೆ ಮಾನದಂಡವೂ ಅಲ್ಲ ಎಂದು ಪ್ರಧಾನಿ ಹೇಳಿದರು.