ಕೇಂದ್ರ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ – News Mirchi

ಕೇಂದ್ರ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ

ನವದೆಹಲಿ: ಸಂಸತ್ ಮುಂಗಾರು ಅಧಿವೇಶನ ಮುಗಿದ ನಂತರ ಪ್ರಧಾನಿ ಮೋದಿ ಕೇಂದ್ ಸಚಿವ ಸಂಪುಟವನ್ನು ವಿಸ್ತಿರಿಸುವ ಸಾಧ್ಯಗಳಿವೆ. ಕೇಂದ್ರ ಸಚಿವ ವೆಂಕಯ್ಯನಾಯ್ಡು ಉಪರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಅವರು ನಿರ್ವಹಿಸುತ್ತಿದ್ದ ಎರಡು ಖಾತೆಗಳು ಖಾಲಿಯಾಗಲಿವೆ.

ಈಗಾಗಲೇ ರಕ್ಷಣಾ ಖಾತೆ, ಪರಿಸರ ಖಾತೆಗಳಿಗ ಪೂರ್ಣ ಪ್ರಮಾಣದ ಸಚಿವರು ಇಲ್ಲ. ರಕ್ಷಣಾ ಖಾತೆಯನ್ನು ಅರುಣ್ ಜೇಟ್ಲಿ, ಪರಸರ ಖಾತೆಯನ್ನು ಮತ್ತೊಬ್ಬ ಸಚಿವ ಹರ್ಷವರ್ಧನ್ ಹೆಚ್ಚುವರಿಯಾಗಿ ವಹಿಸಿಕೊಂಡಿದ್ದಾರೆ. ವೆಂಕಯ್ಯನಾಯ್ಡು ರಾಜೀನಾಮೆಯಿಂದ ನಗರಾಭಿವೃದ್ಧಿ, ಮಾಹಿತಿ ಪ್ರಸಾರ ಸಚಿವಾಲಯ ಜವಾಬ್ದಾರಿಗಳನ್ನು ಮತ್ತೊಬ್ಬರಿಗೆ ವಹಿಸಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸಂಸತ್ ಅಧಿವೇಶನಗಳ ನಂತರ ಸಂಪುಟದಲ್ಲಿ ಬದಲಾವಣೆಗಳಾಗಬಹುದು ಎಂದು ಬಿಜೆಪಿ ಮೂಲಗಳು ಹೇಳಿವೆ.

Click for More Interesting News

Loading...
error: Content is protected !!