ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ – News Mirchi

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ

ಕೇಂದ್ರ ಸರ್ಕಾರಿ ನೌಕರರಿಗೆ ಒಂದು ಸಿಹಿ ಸುದ್ದಿ. ಏಳನೇ ವೇತನ ಆಯೋಗದ ಪ್ರಕಾರ ಕೇಂದ್ರ ಸರ್ಕಾರಿ ನೌಕರರ ವೇತನಗಳು ಹೆಚ್ಚಳವಾಗಲಿವೆ. ಅತಿ ಶೀಘ್ರದಲ್ಲಿಯೇ ಏಳನೇ ವೇತನ ಆಯೋಗ ಮಾಡಿದ ಶಿಫಾರಸ್ಸುಗಳಂತೆ ಕೇಂದ್ರ ಸರ್ಕಾರಿ ನೌಕರರ ಭತ್ಯೆ, ಹೆಚ್.ಆರ್.ಎ ಗಳನ್ನು ಅಂತಿಮಗೊಳಿಸಲಿದೆಯಂತೆ.

ನ್ಯಾಷನಲ್ ಜಾಯಿಂಟ್ ಕೌನ್ಸಿಲ್ ಆಫ್ ಯಾಕ್ಷನ್ (ಎನ್.ಜೆ.ಸಿ.ಎ) ಕನ್ವೀನರ್ ಗೋಪಾಲ್ ಮಿಶ್ರಾ ಅವರು ಹೇಳಿದಂತೆ, ಈ ತಿಂಗಳಾಂತ್ಯಕ್ಕೆ ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ. ಈ ವಿಷಯದ ಕುರಿತು ಈಗಾಗಲೇ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ನೌಕರರ ಸಂಘಟನೆಗಳು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಏಳನೇ ವೇತನ ಆಯೋಗ ಮಾಡಿದ್ದ ಶಿಫಾರಸ್ಸಿಗಿಂತ ಹೆಚ್ಚಿನ ಹೆಚ್.ಆರ್.ಎ (27%) ಸಿಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಏಳನೇ ವೇತನ ಆಯೋಗ ಮಾಡಿದ್ದ ಶಿಫಾರಸ್ಸುಗಳನ್ನು ಪರಿಶೀಲಿಸಿದ ಅಶೋಕ್ ಲಾವಾಸಾ ಸಮಿತಿ, ಇದೇ ಏಪ್ರಿಲ್ 27 ರಂದು ತನ್ನ ವರದಿಯನ್ನು ಹಣಕಾಸು ಸಚಿವಾಲಯಕ್ಕೆ ಸಲ್ಲಿಸಿತ್ತು. ಈ ಸಂದರ್ಭದಲ್ಲಿ ಹಲವು ಬದಲಾವಣೆಗಳನ್ನು ಲಾವಾಸಾ ಸಮಿತಿ ಪ್ರಸ್ತಾಪಿಸಿದೆ. ಎಲ್ಲಾ ನೌಕರರಿಗೆ ಅನುಕೂಲವಾಗುವ ಹಾಗೆ ಮತ್ತು ವಿಶೇಷ ವಿಭಾಗಗಳ ನೌಕರರಿಗೆ ಇವು ಅನ್ವಯವಾಗುವಂತೆ ಪ್ರಸ್ತಾವನೆಗಳಿವೆ. 7ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ದೇಶಾದ್ಯಂತ ಸುಮಾರು 47 ಲಕ್ಷ ಜನ ಕೇಂದ್ರ ಸರ್ಕಾರಿ ನೌಕರರಿಗೆ ಲಾಭವಾಗಿದೆ.

Loading...