ವಿಂಡೋಸ್ 10 ಅಪ್ಡೇಟ್: ಭಾರತೀಯರಿಗಾಗಿ ಭಾರೀ ರಿಯಾಯಿತಿಗೆ ಕೇಂದ್ರದ ಬೇಡಿಕೆ |News Mirchi

ವಿಂಡೋಸ್ 10 ಅಪ್ಡೇಟ್: ಭಾರತೀಯರಿಗಾಗಿ ಭಾರೀ ರಿಯಾಯಿತಿಗೆ ಕೇಂದ್ರದ ಬೇಡಿಕೆ

ಇತ್ತೀಚೆಗೆ ಆತಂಕ ಹುಟ್ಟಿಸುತ್ತಿರುವ ಮಾಲ್ವೇರ್ ಮತ್ತು ರ್ಯಾನ್ಸಮ್ ವೇರ್ ಸೈಬರ್ ದಾಳಿಗಳಿಂದ ತಮ್ಮ ಕಂಪ್ಯೂಟರ್ ಗಳನ್ನು ರಕ್ಷಿಸಿಕೊಳ್ಳಲು ಭಾರತದ ಜನಸಾಮಾನ್ಯರಿಗೂ ಅನುಕೂಲವಾಗುವಂತೆ ಮೈಕ್ರೋಸಾಫ್ಟ್ ಕಂಪನಿಗೆ ಕೇಂದ್ರ ಸರ್ಕಾರ ಮನವಿಯೊಂದನ್ನು ಮಾಡಿದೆ.

ಹಳೆಯ ಆಪರೇಟಿಂಗ್ ಸಿಸ್ಟಮ್ ಗಳಿಂದ ಲೇಟೆಸ್ಟ್ ಆಪರೇಟಿಂಗ್ ಸಿಸ್ಟಮ್ ಗೆ ಅಪ್ಡೇಟ್ ಮಾಡಲು ಒಂದು ಬಾರಿಯ ವಿಶೇಷ ರಿಯಾಯಿತಿ ನೀಡುವಂತೆ ಕೇಳಿದೆ. ಭಾರತದ ಮನವಿಗೆ ಸಾಫ್ಟ್ ವೇರ್ ದಿಗ್ಗಜ ಮೈಕ್ರೋಸಾಫ್ಟ್ ಕೂಡಾ ಇದಕ್ಕೆ ಒಪ್ಪಿದೆ ಎಂದು ರಾಷ್ಟ್ರೀಯ ಸೈಬರ್ ಭದ್ರತಾ ಸಲಹೆಗಾರ ಗುಲ್ಶನ್ ರೈ ಹೇಳಿದ್ದಾರೆ. ಸೈಬರ್ ದಾಳಿಗಳಿಂದ ಪಾರಾಗಲು ಜನಸಾಮಾನ್ಯರೂ ತಮ್ಮ ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಂ ಗಳನ್ನು ನವೀಕರಿಸಲು ಸರ್ಕಾರ ಬಯಸಿದೆ ಎಂದು ಅವರು ಹೇಳಿದ್ದಾರೆ.

ಆ ಒಂದು ಅವಮಾನಕರ ಪ್ರಶ್ನೆಯೇ ಸರ್ಜಿಕಲ್ ಸ್ಟ್ರೈಕ್ ಗೆ ಕಾರಣವಾಯಿತು

ನವೀನ ಆಪರೇಟಿಂಗ್ ಸಿಸ್ಟಮ್ “ವಿಂಡೋಸ್ 10” ಗೆ ನವೀಕರಿಸಲು ಮೈಕ್ರೋಸಾಫ್ಟ್ ಈಗ ವಿಧಿಸುತ್ತಿರುವ ಶುಲ್ಕದಲ್ಲಿ ಶೇ.25 ರಷ್ಟನ್ನು ಮಾತ್ರ ವಿಧಿಸುವಂತೆ ಸರ್ಕಾರ ಕಂಪನಿಯನ್ನು ಕೋರುತ್ತಿದೆ. ಹೀಗಾದಾಗ ಸಾಮಾನ್ಯ ಜನರೂ ತಮ್ಮ ಸೈಬರ್ ದಾಳಿಗಳಿಂದ ತಮ್ಮ ಕಂಪ್ಯೂಟರ್ ಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವಂತಾಗುತ್ತದೆ ಎಂದು ಕೇಂದ್ರದ ಚಿಂತನೆ ಎಂದು ರೈ ಹೇಳಿದ್ದಾರೆ.

ಒಂದು ವೇಳೆ ಭಾರತದ ಮನವಿಗೆ ಮೈಕ್ರೋಸಾಫ್ಟ್ ಒಪ್ಪಿದ್ದೇ ಆದಲ್ಲಿ, ಇತರೆ ದೇಶಗಳಿಂದಲೂ ಇದೇ ರೀತಿಯ ಬೇಡಿಕೆಗಳು ಬರುವ ಸಾಧ್ಯತೆ ಇದೆ. ಹೀಗಾಗಿ ಈ ಕುರಿತು ಮೈಕ್ರೋಸಾಫ್ಟ್ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.

ಮೈಕ್ರೋಸಾಫ್ಟ್ ನೂತನ ಆಪರೇಟಿಂಗ್ ಸಿಸ್ಟಮ್ “ವಿಂಡೋಸ್ 10 ಹೋಮ್” ಬೆಲೆ ಸದ್ಯ ರೂ. 8,000 ಆಗಿದೆ. ಅದೇ ವಿಂಡೋಸ್ 10 ಪ್ರೊಫೆಷನಲ್ ವರ್ಷನ್ ಗೆ ರೂ. 14,999 ಬೆಲೆ ಇದೆ. ಭಾರತದಲ್ಲಿ ಲಕ್ಷಾಂತರ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಬಳಕೆದಾರರಿದ್ದು, ಕೆಲವೇ ಕೆಲವರು ಮಾತ್ರ ಹೊಸ ವರ್ಷನ್ ಗೆ ಅಪ್ಡೇಟ್ ಮಾಡಿಕೊಂಡಿದ್ದಾರೆ.

ವರದಿಗಳ ಪ್ರಕಾರ ಇತ್ತೀಚಿನ ಪೆಟ್ಯಾ ಎಂಬ ಸೈಬರ್ ದಾಳಿಗಳಲ್ಲಿ ಏಷ್ಯಾದಲ್ಲಿ ಭಾರತವೇ ಹೆಚ್ಚು ನಷ್ಟಕ್ಕೊಳಗಾಗಿದೆ. ಈ ದಾಳಿಯಿಂದಾಗಿ ಜವಾಹರ ಲಾಲ್ ನೆಹರು ಪೋರ್ಟ್ ಟ್ರಸ್ಟ್ ತನ್ನ ಒಂದು ಘಟಕದ ಕಾರ್ಚರಣೆಯನ್ನು ಜೂನ್ 28 ರಂದು ಬಂದ್ ಮಾಡಬೇಕಾಗಿ ಬಂದಿತ್ತು.

Loading...
loading...
error: Content is protected !!