ನಿಮ್ಮ ಯೋಜನೆಗೆ ನಮ್ಮ ಹಣ ಕೇಳಬೇಡಿ ಎಂದ ಮಮತಾ ಬ್ಯಾನರ್ಜಿ

ಕೇಂದ್ರ ಸರ್ಕಾರ ತನ್ನ ಬಜೆಟ್ ನಲ್ಲಿ ಘೋಷಿಸಿರುವ ಆರೋಗ್ಯ ವಿಮೆ ಯೋಜನೆಗೆ ರಾಜ್ಯ ಸರ್ಕಾರದಿಂದ ವೆಚ್ಚ ಭರಿಸುವ ಅಂಶಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ್ದಾರೆ. ಕೇಂದ್ರ ಬಜೆಟ್ ನಲ್ಲಿ ಪ್ರಕಟಿಸಿರುವ ತನ್ನ ಆರೋಗ್ಯ ಯೋಜನೆಗಳಿಗೆ ರಾಜ್ಯ ಸರ್ಕಾರಗಳಿಂದ ಹಣ ಪಾವತಿಸುವಂತೆ ಒತ್ತಾಯಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಸರ್ವಾಧಿಕಾರಿ ಧೋರಣೆ ಒಪ್ಪಲ್ಲ

ಈ ವಿಷಯದಲ್ಲಿ ನಾವು ಕೇಂದ್ರ ಸರ್ಕಾರದ ಸರ್ವಾಧಿಕಾರವನ್ನು ಒಪ್ಪುವುದಿಲ್ಲ. ನೀವು ಜಾರಿಗೆ ತರುತ್ತಿರುವ ಯೋಜನೆಗೆ ರಾಜ್ಯಸರ್ಕಾರಗಳು ಶೇ.40 ರಷ್ಟು ವೆಚ್ಚವನ್ನು ಭರಿಸಬೇಕು ಎಂದು ನಿರ್ಧರಿಸಿದ್ದೀರಿ, ಈ ಯೋಜನೆ ಘೋಷಿಸುವುದಕ್ಕೂ ಮುನ್ನ ನೀವು ನಮ್ಮೊಂದಿಗೆ ಚರ್ಚೆ ನಡೆಸಿದ್ದರೇ? ಎಂದು ಪ್ರಶ್ನಿಸಿದ್ದಾರೆ. ನಮ್ಮನ್ನು ವೆಚ್ಚ ಭರಿಸುವಂತೆ ನೀವು ಒತ್ತಾಯಿಸುವಂತಿಲ್ಲ, ಅಷ್ಟು ದುಡ್ಡೇ ನಮ್ಮ ಬಳಿಯಿದ್ದರೆ ನಾವೇ ಆ ಯೋಜನೆಯನ್ನು ಹೊರತರುತ್ತಿದ್ದೆವು ಎಂದು ಅವರು ಹೇಳಿದ್ದಾರೆ.

ಬಾಲಕನನ್ನು ಕೊಂದು ಒಂದು ತಿಂಗಳು ಸೂಟ್ಕೇಸ್ ನಲ್ಲಿ ಬಚ್ಚಿಟ್ಟಿದ್ದ ಐಎಎಸ್ ಆಕಾಂಕ್ಷಿಯ ಬಂಧನ

ನಾದಿಯಾದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಮಮತಾ, ತಮ್ಮ ಸರ್ಕಾರ ಈಗಾಗಲೇ ಸ್ವಾಸ್ಥ್ಯ ಸಾಥಿ ಯೋಜನೆಯನ್ನು ಜಾರಿಗೆ ತಂದಿದ್ದು, 50 ಲಕ್ಷ ಜನ ಇದರ ಪ್ರಯೋಜನವನ್ನು ಪಡೆದಿದ್ದಾರೆ ಎಂದು ಹೇಳಿದರು.

ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳಿಗಾಗಿ ತಂದಿರುವ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯನ್ನು ಕೇಂದ್ರ ಬಜೆಟ್ ಕಡೆಗಣಿಸಿದೆ. ಇಡೀ ದೇಶಕ್ಕೆ ಈ ಯೋಜನೆಗೆ ಕೇವಲ ರೂ.100 ಕೋಟಿ ಮೀಸಲಿಟ್ಟಿದೆ. ಆದರೆ ಪಶ್ಚಿಮ ಬಂಗಾಳ ಸರ್ಕಾರವು ಕೇಂದ್ರದ ನೆರವಿಲ್ಲದೆ ಕನ್ಯಾಶ್ರೀ ಯೋಜನೆಗೆ ರೂ.5,000 ಕೋಟಿ ನೀಡಿದೆ ಎಂದು ಹೇಳಿದರು.

ಪಾಕಿಸ್ತಾನದೊಂದಿಗೆ ಮಾತುಕತೆ ಬಿಟ್ಟು ಬೇರೆ ಮಾರ್ಗವಿಲ್ಲ: ಮೆಹಬೂಬಾ ಮುಫ್ತಿ

ಕೇಂದ್ರ ಇತ್ತೀಚೆಗೆ ತನ್ನ ಬಜೆಟ್ಟಿನಲ್ಲಿ  ಘೋಷಿಸಿರುವ ಆರೋಗ್ಯ ವಿಮೆ ಯೋಜನೆ ವೆಚ್ಚದಲ್ಲಿ ರಾಜ್ಯಗಳು ಶೇ.40 ರಷ್ಟನ್ನು ಭರಿಸಬೇಕು ಎಂದು ನೀತಿ ಆಯೋಗ ಹೇಳಿತ್ತು.

Get Latest updates on WhatsApp. Send ‘Subscribe’ to 8550851559