ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಸಿಹಿ ಸುದ್ದಿ |News Mirchi

ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಸಿಹಿ ಸುದ್ದಿ

50 ಲಕ್ಷ ಉದ್ಯೋಗಿಗಳಿಗೆ ಮತ್ತು 61 ಲಕ್ಷ ಪಿಂಚಣಿದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ತುಟ್ಟಿಭತ್ಯೆಯನ್ನು ಶೇ.1 ರಷ್ಟು ಹೆಚ್ಚಳ ಮಾಡಿ ಶೇ.5 ಕ್ಕೇರಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಂಗಳವಾರ ನಡೆದ ಕೇಂದ್ರ ಸಚಿವಸಂಪುಟ ಸಭೆಯಲ್ಲಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ.

ಮೂಲ ವೇತನ, ಪಿಂಚಣಿಯಡಿ ನೀಡುತ್ತಿದ್ದ ಶೇ.4 ರಷ್ಟು ತುಟ್ಟಿಭತ್ಯೆಯನ್ನು ಶೇ.1 ರಷ್ಟು ಅಂದರೆ ಶೇ.5ಕ್ಕೆ ಹೆಚ್ಚಳ ಮಾಡುತ್ತಿರುವುದಾಗಿ ಅಧಿಕೃತ ಪ್ರಕಟಣೆ ನೀಡಿದೆ. ಈ ಹೊಸ ದರ ಜುಲೈ 1 ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ ಎಂದು ಸಚಿವಸಂಪುಟ ತಿಳಿಸಿದೆ.

ಡಿಎ, ಡಿಆರ್ ಎರಡು ಖಾತೆಗಳ ಮೂಲಕ ಬೊಕ್ಕಸದ ಮೇಲೆ ಬೀಳುವ ಹೊರೆ ರೂ.3,068.26 ಕೋಟಿ ಎಂದು ಹೇಳಲಾಗಿದೆ. ಅದೇ 2017-18 ಆರ್ಥಿಕ ವರ್ಷದಲ್ಲಿ 8 ತಿಂಗಳಿಗೆ(ಜುಲೈ 2017 ರಿಂದ ಫೆಬ್ರವರಿ 2018) ರೂ.2,045.50 ಕೋಟಿ ಇರಬಹುದು ಎನ್ನಲಾಗಿದೆ. ಕೇಂದ್ರ ಕ್ಯಾಬಿನೆಟ್ ಮಂಗಳವಾರ ತೆಗೆದುಕೊಂಡ ಈ ನಿರ್ಧಾರದಿಂದಾಗಿ 49.26 ಲಕ್ಷ ಸರ್ಕಾರಿ ಉದ್ಯೋಗಿಗಳು, 61.17 ಲಕ್ಷ ಪಿಂಚಣಿದಾರರು ಲಾಭ ಪಡೆಯಲಿದ್ದಾರೆ.

Get Latest updates on WhatsApp. Send ‘Add Me’ to 8550851559

Loading...
loading...
error: Content is protected !!